ಚೆಸ್ ವಿಶ್ವಕಪ್ ಫೈನಲ್ ನ 2ನೇ ಪಂದ್ಯವೂ ಡ್ರಾ ದೊಂದಿಗೆ ಅಂತ್ಯವಾಗಿದೆ. ಭಾರತದ ಆರ್. ಪ್ರಜ್ಞಾನಂದ ಮತ್ತು ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲಸನ್ ನಾಳೆ(ಗುರುವಾರ) ಅಂತಿಮ ಟೈ ಬ್ರೇಕರ್ ಆಡಲಿದ್ದಾರೆ.
ಎರಡು ಕ್ಲಾಸಿಕ್ ಗೇಮ್ಗಳಲ್ಲೂ ಫಲಿತಾಂಶ ಮೂಡಿಬರದ ಕಾರಣ ಪಂದ್ಯವನ್ನು ಟೈಬ್ರೇಕರ್ನತ್ತ ಕೊಂಡೊಯ್ಯಲಾಗಿದೆ. ಗುರುವಾರ ನಡೆಯಲಿರುವ ಟೈಬ್ರೇಕರ್ ಪಂದ್ಯದ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.