ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಹಾಗೂ ಬ್ಯಾಟಿಂಗ್ ನ ಸಂಘಟಿತ ಹೋರಾಟದ ಫಲವಾಗಿ ಚೆನ್ನೈ ನ ಚೆಪಾಕ್ ಕ್ರೀಡಾಂಗಣದಲ್ಲಿ 17 ವಷ೯ (6150) ದಿನಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೂಪರ್ಸ್ ಕಿಂಗ್ಸ್ ವಿರುದ್ಧ 50 ರನ್ ಗೆಲುವು ಸಾಧಿಸಿತು.
ಟಾಸ್ ಸೋತು ಬೌಲಿಂಗ್ ಆಯ್ಕೆ ಮಾಡಿದ ನಾಯಕ ರುತುರಾಜ್ ಗಾಯಕ್ವಾಡ್ ನಿರ್ಧಾರ ಸರಿಯಾಗಿರಲಿಲ್ಲ, ಆರ್ ಸಿ ಬಿ ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ (31) ಹಾಗೂ ಫಿಲ್ ಸಾಲ್ಟ್ (32) ಉತ್ತಮ ಆರಂಭ ನೀಡಿದರು.
ನಂತರ ಬಂದ ದೆವದತ್ತ ಪಡಿಕಲ್(27) ಹಾಗೂ ನಾಯಕ ರಜತ್ ಪಾಟಿದರ್ ಆಕರ್ಷಕ ಅರ್ಧಶತಕ (51) ಹಾಗೂ ಕೊನೆಯಲ್ಲಿ ಬಂದ ಟೀಮ್ ಡೇವಿಡ್ ಮೂರು ಸಿಕ್ಸರ್ ನೆರವಿನಿಂದ ಅಜೇಯ 22 ರನ್ ಪೇರಿಸಿ ತಂಡದ ಮೊತ್ತವನ್ನು 196 ರನ್ ಪೇರಿಸಿದರು.
ಬೃಹತ್ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭಿಕ ಆಘಾತ ಅನುಭವಿಸಿತು, ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿ (5) ಹಾಗೂ ನಾಯಕ ರುತುರಾಜ್ ಗಾಯಕ್ವಾಡ್ (0) ಹೆಜಲ್ವುಡ್ ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಮದ್ಯಮ ಕ್ರಮಾಂಕದ ಆಟಗಾರರಾದ ದೀಪಕ್ ಹೂಡ, ಸ್ಯಾಮ್ ಕರನ್ ಹಾಗೂ ಶಿವಂ ದುಬೆ ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು.
ಆರ್ ಸಿಬಿ ಪರವಾಗಿ ವೇಗಿ ಜೋಶ್ ಹೆಜಲ್ವುಡ್ ಮೂರು ವಿಕೆಟ್ ಪಡೆದರು, ಯಶ್ ದಯಾಳ್ ಹಾಗೂ ಲಿವಿಂಗ್ ಸ್ಟನ್ ತಲಾ ಎರಡು ವಿಕೆಟ್ ಕಬಳಿಸಿದರೆ ಭುವನೇಶ್ವರ್ ಕುಮಾರ್ ಒಂದು ವಿಕೆಟ್ ಪಡೆದು ಮಿಂಚಿದರು.