Categories: ಕೋಲಾರ

ಚೆನ್ನೈ ಕಾರಿಡಾರ್ ನಿಂದ ಕೆರೆ ಸ್ವರೂಪ ಹಾಳು, ರೈತರ ಬೆಳೆಗಳಿಗೆ ಹಾನಿ‌: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರೈತ ಸಂಘ ಒತ್ತಾಯ

ಕೋಲಾರ: ಜಿಲ್ಲಾಧಿಕಾರಿ ಆದೇಶವನ್ನು ಗಾಳಿಗೆ ತೂರಿ ಕೆರೆಯ ಸ್ವರೂಪವನ್ನೇ ಹಾಳು ಮಾಡಿರುವ ಚೆನ್ನೈ ಕಾರಿಡಾರ್ ರಸ್ತೆಯ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಂಡು ದೂಳಿನಿಂದ ರಸ್ತೆಯ ಅಕ್ಕಪಕ್ಕದಲ್ಲಿ ನಷ್ಟವಾಗಿರುವ ರೈತರ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ನೀಡುವಂತೆ ರೈತ ಸಂಘದಿಂದ ಸಣ್ಣ ನಿರಾವರಿ ಇಲಾಖೆ ಅಧಿಕಾರಿ ಹರಿಕೃಷ್ಣ ಅವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.

ಚೆನ್ನೈ ಕಾರಿಡಾರ್ ರಸ್ತೆ ಕಾಮಗಾರಿ ಮುಗಿಯುವ ಹಂತ ತಲುಪಿದ್ದು ಗುತ್ತಿಗೆದಾರರ ನಿರ್ಲಕ್ಷದಿಂದ ಹಾಳಾಗಿರುವ ಕೆರೆಗಳನ್ನು ಪರಿಶೀಲನೆ ಮಾಡಬೇಕಾದ ಗಣಿ ಇಲಾಖೆ ಅಧಿಕಾರಿಗಳು ಕಛೇರಿಯಲ್ಲಿಯೇ ಕುಳಿತು ಪರಿಶೀಲನಾ ವರದಿಯ ಕಡತ ಸೃಷ್ಠಿ ಮಾಡಿ ಎನ್.ಒ.ಸಿ ನೀಡಿರುವುದು ದುರಾದೃಷ್ಠಕರ ವಿಚಾರ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ರೈತರು ಕೃಷಿ ಭೂಮಿಗೆ ಹಾಗೂ ಇಟ್ಟಿಗೆ ಕಾರ್ಖಾನೆಗೆ ಮಣ್ಣು ಬೇಕಾದರೆ ನೂರೊಂದು ಕಾನೂನು ಹೇಳುವ ಗಣಿ ಹಾಗೂ ಸಣ್ಣ ನೀರಾವರಿ ಅಧಿಕಾರಿಗಳಿಗೆ ಚೆನ್ನೈ ಕಾರಿಡಾರ್ ಗುತ್ತಿಗೆದಾರರ ಕೆರೆ ಹಾಳು ಮಾಡುತ್ತಿರುವುದು ಅಧಿಕಾರಿಗಳ ಕಣ್ಣಿಗೆ ಕಾಣಿಸುತ್ತಿಲ್ಲವೆ ಎಂದು ಪ್ರಶ್ನೆ ಮಾಡುವ ಜೊತೆಗೆ ರೈತರಿಗೆ ಒಂದು ನ್ಯಾಯ ರಾಜಕೀಯ ಬೆಂಬಲ ಇರುವವರಿಗೆ ಒಂದು ನ್ಯಾಯವೇ ಎಂದು ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.

ರಸ್ತೆ, ಕೈಗಾರಿಕೆ ಅಭಿವೃದ್ದಿ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ಬಲವಂತದಿಂದ ಕಾನೂನಿನ ಭಯ ಹುಟ್ಟಿಸಿ. ವಶಪಡಿಸಿಕೊಂಡು ಪರಿಹಾರ ನೀಡದೇ ಕಛೇರಿಗೆ ಅಲೆದಾಡಿಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಜಲ ಮೂಲಗಳ ಜೀವನಾಡಿಯಾದ ಕೆರೆಗಳನ್ನು ಚೆನ್ನೈ ಕಾರಿಡಾರ್ ಹೈವೆ ಅಭಿವೃದ್ದಿ ಗುತ್ತಿಗೆದಾರರು ಸಂಪೂರ್ಣವಾಗಿ ತಮಗೆ ಇಷ್ಟಬಂದ ರೀತಿ ಮಣ್ಣು ತೆಗೆಯುವ ಮೂಲಕ ಕೆರೆಗಳನ್ನು ಹಾಳು ಮಾಡುತ್ತಿದ್ದರು ಅದನ್ನು ತಡೆಯಬೇಕಾದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆಂದು ಕಿಡಿಕಾರಿದರು.

ರಸ್ತೆ ಅಭಿವೃದ್ದಿ ಮಾಡುತ್ತಿರುವುದಕ್ಕೆ ನಮ್ಮ ಅಭ್ಯಂತರವು ಇಲ್ಲ ಆದರೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಣ್ಣ ನೀರಾವರಿ ಇಲಾಖೆ, ಅಧಿಕಾರಿಗಳು ಕೆರೆಯಲ್ಲಿ ಮಣ್ಣು ತೆಗೆಯಲು ಚೆನ್ನೈ ಕಾರಿಡಾರ್ ರಸ್ತೆ ಗುತ್ತಿಗೆದಾರರಿಗೆ ನೀಡಿರುವುದು 3 ರಿಂದ 4 ಅಡಿ ಜೊತೆಗೆ ಯಾವುದೇ ರೀತಿಯ ಕೆರೆಗೆ ಹಾನಿಯಾಗದ ಜೊತೆಗೆ ಮಳೆ ನೀರು ಸಂಗ್ರಹವಾದಾಗ ಪ್ರಾಣಿಗಳಿಗೆ ತೊಂದರೆಯಾಗಬೇಕೆಂದು ನಿರ್ಬಂಧನೆಗಳನ್ನು ನೀಡಿ ಆದೇಶ ನೀಡಿದರೆ ಗುತ್ತಿಗೆದಾರರು ಆದೇಶಗಳನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದ ಹಾಗೆ 10 ರಿಂದ 30 ಅಡಿಯವರೆಗೂ ಆಳ ಮಾಡುವ ಮೂಲಕ ಕೆರೆಯ ಸ್ವರೂಪಗಳನ್ನು ಹಾಳು ಮಾಡುತ್ತಿದ್ದಾರೆಂದು ಗುತ್ತಿಗೆದಾರರ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ದುಬಾರಿ ಆಗಿರುವ ಕೃಷಿ ಕ್ಷೇತ್ರದ ಮೇಲೆ ಖಾಸಗಿ ಸಾಲ ಮಾಡಿ ಲಕ್ಷಾಂತರ ಬಂಡವಾಳ ಹಾಕಿ ರೋಗಗಳಿಂದ ಬೆಳೆ ರಕ್ಷಣೆ ಮಾಡಿಕೊಂಡರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿ ಸಂಕಷ್ಟಕ್ಕಿದ್ದ ರೈತರಿಗೆ ಮತ್ತೆ ಚೆನೈ ಕಾರಿಡಾರ್ ರಸ್ತೆ ಅಭಿವೃದ್ದಿ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಅಕ್ಕ ಪಕ್ಕದ ರೇಷ್ಮೆ ಟೆಮೊಟೋ ಕ್ಯಾಪ್ಸಿಕಂ ಹೂ ಬೆಳೆಗಳು ದೂಳಿಗೆ ಸಂಪೂರ್ಣ ನಾಶವಾಗುತ್ತಿದ್ದರೂ ಗುತ್ತಿಗೆದಾರರು ಕನಿಷ್ಠ ಪಕ್ಷದ ಸೌರ್ಜನ್ಯಕಾದರು ರಸ್ತೆಯಲ್ಲಿ ನೀರನ್ನು ಸಿಂಪರಣೆ ಮಾಡುತ್ತಿಲ್ಲ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಮಾನ್ಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಗುತ್ತಿಗೆದಾರರಿಂದ ನಷ್ಟವಾಗಿರುವ ಪ್ರತಿ ಎಕೆರೆಗೆ ೫ ಲಕ್ಷ ಪರಿಹಾರ ಕೊಡಿಸಬೇಕೆಂದು ಒತ್ತಾಯ ಮಾಡಿದರು.

ಕೆರೆ ಸ್ವರೂಪವನ್ನು ಹಾಳು ಮಾಡುತ್ತಿರುವ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಂಡು ಕೆರೆಗಳನ್ನು ಅಭಿವೃದ್ದಿಪಡಿಸಿ ಮಳೆಗಾಲದಲ್ಲಿ ಜಾನುವಾರಗಳನ್ನು ಮತ್ತು ಅಮಾಯಕ ರೈತ ಕೂಲಿಕಾರ್ಮಿಕ ಜೀವವನ್ನು ಉಳಿಸಬೇಕೆಂದು ಮನವಿ ನೀಡಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಹರಿಕೃಷ್ಣ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಂಬಂದಫಟ್ಟ ಗುತ್ತಿಗೆದಾರರು ಹಾಗೂ ಎನ್.ಹೆಚ್.ಎ.ಐ ಅಧಿಕಾರಿಗಳು ಸಭೆ ಕರೆದು ಕೆರೆಯ ಸ್ವರೂಪವನ್ನು ಹಾಳು ಮಾಡಿರುವ ಹಾಗೂ ರೈತರ ಬೆಳೆ ನಷ್ಟವಾಗಿರುವ ಸ್ಥಳವನ್ನು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಕೆರೆಗಳಿಗೆ ಹಾನಿಯಾಗದ ರೀತಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

ಮನವಿ ನೀಡುವಾಗ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಶಿವಾರೆಡ್ಡಿ, ಯಲ್ಲಪ್ಪ, ಕೆ.ಇ.ಬಿ ಚಂದ್ರು, ಗೀರೀಶ್, ಸುಪ್ರೀಂ ಚಲ, ಶೈಲಜ, ರತ್ನಮ್ಮ ಚೌಡಮ್ಮ, ಶೋಭ, ಮಹಾಲಕ್ಷ್ಮಿ, ಮುಂತಾದವರಿದ್ದರು.

Ramesh Babu

Journalist

Share
Published by
Ramesh Babu

Recent Posts

ನೊಂದವರ ನೋವಾ ನೋಯದವರೆತ್ತ ಬಲ್ಲರೋ……

ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ…

7 hours ago

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು- ಎಸ್ಪಿ ಸಿ.ಕೆ ಬಾಬಾ

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…

21 hours ago

ಗೊತ್ತಿರದ ವಿಷಯ ಕಲಿಯುವ ಕಡೆ ಗಮನ ಕೇಂದ್ರೀಕರಿಸಿ- ಡಾ. ಸೀಮಾ ಚೋಪ್ರಾ

"ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ,…

22 hours ago

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನಿಂದ ಕ್ರೂರವಾಗಿ ಹಲ್ಲೆ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು: ಒಬ್ಬ ಬಾಲಕ ಜೀವನ್ಮರಣ ಹೋರಾಟ

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…

1 day ago

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

2 days ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

2 days ago