ಚೆಕ್ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ

ತಾಲ್ಲೂಕಿನ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ದಂಡುದಾಸನಕೊಡಿಗೆಹಳ್ಳಿ, ವಾಸುದೇವನಹಳ್ಳಿ ಗ್ರಾಮದ ಬಳಿ 50 ಲಕ್ಷ ರೂಪಾಯಿ ಅನುದಾನದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಬುಧವಾರ ಗುದ್ದಲಿ ಪೂಜೆ ಮಾಡಲಾಯಿತು.

ಕಾಂಗ್ರೆಸ್ ಜಿಲ್ಲಾ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ, ಈ ಭಾಗದ ಹಲವು ಗ್ರಾಮಗಳಲ್ಲಿ ನೀರಿನ ಅಭಾವ ಬಹಳಷ್ಟು ಇದ್ದು, ಈ ಸಮಸ್ಯೆಯನ್ನು ನೀಗಿಸಲು ಹಲವು ವರ್ಷಗಳಿಂದ ಪಂಚಾಯತಿ ಅಧಿಕಾರಿಗಳು ಹಾಗೂ ಸದಸ್ಯರು ಸಾಕಷ್ಟು ಪ್ರಯತ್ನ ಪಡುತ್ತಿದ್ದರು. ಈ ವಿಚಾರವಾಗಿ ಈಗಾಗಲೇ ಅನೇಕ ಬಾರಿ ಚರ್ಚೆಗಳಾಗಿದ್ದರೂ, ಸಹ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಇಂದು ಸಣ್ಣ ನಿರಾವರಿ ಇಲಾಖಾ ವತಿಯಿಂದ ೫೦ ಲಕ್ಷ ರೂಪಾಯಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡುತ್ತಿರುವುದು ಈ ಭಾಗದ ರೈತರಿಗೆ ಕೃಷಿಯ ನಿರಾವರಿಗೆ ಅನುಕೂಲವಾಗಲಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲವು ವೃದ್ಧಿಯಾಗುತ್ತದೆ ಎಂದರು.

ಈ ವೇಳೆ ಸಣ್ಣ ನಿರಾವರಿ ಇಂಜಿನಿಯರ್ ನವೀನ್ ಕುಮಾರ್, ಪಿಡಿಓ ಸೌಮ್ಯ, ಗ್ರಾ.ಪಂ ಸದಸ್ಯರಾದ ಮಂಜುಳಾ, ಸುರೇಶ್, ಮಾಜಿ ಅಧ್ಯಕ್ಷ ನರಸಿಂಹ, ಎಂಪಿಸಿಎಸ್ ಮಾಜಿ ಅಧ್ಯಕ್ಷ ನಂಜಪ್ಪ, ಮುಖಂಡರಾದ ರಾಮಾಂಜಿನಪ್ಪ, ಮಂಜುನಾಥ, ಮೂರ್ತಿ ಇದ್ದರು.

Leave a Reply

Your email address will not be published. Required fields are marked *