ಚುನಾವಣ ಪ್ರಚಾರಕ್ಕಾಗಿ ತೆಲಂಗಾಣಕ್ಕೆ ಹೋಗುತ್ತೀರಿ ಇಲ್ಲಿನ ರೈತರ ಕಷ್ಟ ಆಲಿಸಲ್ಲ ಏಕೆ?: ಸಾಧ್ಯವಾದರೆ ಅಧಿಕಾರ ಮಾಡಿ ಇಲ್ಲವಾದರೆ ಜನರಿಗಾಗಿ ಅಧಿಕಾರ ತ್ಯಜಿಸಿ- ರಾಜ್ಯ ಸರ್ಕಾರಕ್ಕೆ ಎಂಎಲ್ ಸಿ ಕೋಟಾ ಶ್ರೀನಿವಾಸ ಪೂಜಾರಿ‌ ಸಲಹೆ

ರಾಜ್ಯದಲ್ಲಿ ಬರಗಾಲ ಬಂದು ರೈತರನ್ನ ಸಂಕಷ್ಟಕ್ಕೆ ದೂಡಿದೆ. ಸಂಕಷ್ಟದಲ್ಲಿರುವ ರೈತರನ್ನು ಪಾರುಮಾಡುವುದನ್ನ ಬಿಟ್ಟು ಕೇಂದ್ರ ಸರ್ಕಾರವನ್ನ ಟೀಕೆ ಟಿಪ್ಪಣಿ ಮಾಡುತ್ತಾ ರಾಜ್ಯ ಕಾಂಗ್ರೆಸ್ ಕಾಲಹರಣ ಮಾಡಲಾಗುತ್ತಿರುವುದು ಎಷ್ಟರ‌ಮಟ್ಟಿಗೆ ಸರಿ? ಎಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.

ಇಂದು ದೊಡ್ಡಬಳ್ಳಾಪುರ ತಾಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಬರ ವೀಕ್ಷಣೆಯನ್ನ ಮಾಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಬರ ಪರಿಹಾರ‌ ಬಂದಿಲ್ಲ. ರಾಜ್ಯದ ಪರವಾಗಿ ಮೋದಿ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ‌ ಎಂದು ಹೇಳುವುದನ್ನ ಬಿಟ್ಟು, ಬರ ವೀಕ್ಷಣೆಗೆ ತಂಡ ರಚನೆ ಮಾಡಿ, ತಂಡಗಳಿಂದ ವರದಿ ಪಡೆದು ಸೂಕ್ತ ಪರಿಹಾರ ಒದಗಿಸುವಲ್ಲಿ ನಿರತರಾಗಿ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ನಂತರ ಸಚಿವ ಕೃಷ್ಣ ಬೈರೇಗೌಡ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸುಮ್ಮನೆ ಕೇಂದ್ರ ಸರ್ಕಾರವನ್ನೇಕೆ ದೂರುತ್ತೀರಿ?, ನೀವು ಇರುವುದು ಏನಕ್ಕೆ?, ನೀವು ಏನೆ ಮಾತನಾಡಿದರೂ ಜನ ನಂಬುತ್ತಾರೆ ಎಂದು ಭಾವಿಸಬೇಡಿ, ರಾಜ್ಯಾದ್ಯಂತ ಬಿಜೆಪಿ ಹದಿನೇಳು ತಂಡವಾಗಿ ಬರ ಸಮೀಕ್ಷೆ ಮಾಡುತ್ತಿದೆ‌ ನಾವು ಎಲ್ಲಿಗೆ ಹೋದರು ಕೂಡಾ ಡಿಸಿ, ತಹಶಿಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಯು ಸಹ ಬರ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ರಾಜ್ಯ ಸರ್ಕಾರ ಸಂಪೂರ್ಣ ನಿಕ್ಷ್ರಿಯವಾಗಿದೆ. ಹಾಗಾಗಿ ನಾವು ಬರ ಅಧ್ಯಯನ ಮಾಡುತ್ತಿದ್ದೇವೆ ಎಂದು ಹೇಳಿದರು.

ಹತ್ತು ಸಾವಿರ ಕೋಟಿ ಬರ ನಿರ್ವಹಣೆಗಾಗಿ ಹಣ ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರದ ಮುಂದೆ ಬಿಜೆಪಿ ಬೇಡಿಕೆ ಇಟ್ಟಿದೆ. ಕೇಂದ್ರದ ಜೊತೆ ನಾವು ಮಾತಾಡುವುದಾದರೆ ನೀವು ಇರುವುದು ಏನಕ್ಕೇ?. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ ಮಂತ್ರಿ ಇರುವುದಾದರೂ ಏಕೆ? ಎಂದು‌ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ತೆಲಂಗಾಣಕ್ಕೆ ಪ್ರಚಾರಕ್ಕಾಗಿ ಹೋಗುತ್ತೀರಿ ಇಲ್ಲಿನ ರೈತರ ಕಷ್ಟ ಆಲಿಸಲ್ಲ ಏಕೆ? ಸಾಧ್ಯವಾದರೆ ಅಧಿಕಾರ ಮಾಡಿ ಇಲ್ಲವಾದರೆ ಜನರಿಗಾಗಿ ಅಧಿಕಾರ ತ್ಯಜಿಸಿ ಎಂದು ಗುಡುಗಿದರು.

Leave a Reply

Your email address will not be published. Required fields are marked *