ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತವು 2023ರ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಕಲ ರೀತಿಯಲ್ಲೂ ಸಜ್ಜುಗೊಂಡಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಸಿದ್ಧತೆಗಳ ವಿವರಗಳನ್ನು ನೀಡಿದ್ದಾರೆ.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಮೇ.10ರಂದು ಮತದಾನ ಹಾಗೂ ಮೇ. 13 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಚುನಾವಣಾ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ವಿವರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ, ಚುನಾವಣೆಯ ಅಂತಿಮ ಕಣದಲ್ಲಿ 50 ಪುರುಷರು ಹಾಗೂ 06 ಮಹಿಳೆಯರು ಸೇರಿದಂತೆ ಒಟ್ಟು 56 ಅಭ್ಯರ್ಥಿಗಳಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರ:- 23 ಅಭ್ಯರ್ಥಿಗಳು
ದೇವನಹಳ್ಳಿ ವಿಧಾನಸಭಾ ಕ್ಷೇತ್ರ:- 11 ಅಭ್ಯರ್ಥಿಗಳು
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ:- 12 ಅಭ್ಯರ್ಥಿಗಳು
ನೆಲಮಂಗಲ ವಿಧಾನಸಭಾ ಕ್ಷೇತ್ರ:- 10 ಅಭ್ಯರ್ಥಿಗಳು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರ ಅಂಕಿಅಂಶ
ಜಿಲ್ಲಿಯ ಒಟ್ಟು ಮತದಾರರ ಸಂಖ್ಯೆ 8,77,890
ಪುರುಷ ಮತದಾರರ ಸಂಖ್ಯೆ4,35,835
ಮಹಿಳಾ ಮತದಾರರ ಸಂಖ್ಯೆ 4,41,907
ಇತರೆ ಮತದಾರರ ಸಂಖ್ಯೆ 148
ಕ್ಷೇತ್ರವಾರು ಮತದಾರರ ಅಂಕಿಅಂಶ
ಹೊಸಕೋಟೆ ವಿಧಾನಸಭಾ ಕ್ಷೇತ್ರ
ಪುರುಷ ಮತದಾರರ ಸಂಖ್ಯೆ 1,16,252
ಮಹಿಳಾ ಮತದಾರರ ಸಂಖ್ಯೆ 1,17,805
ಇತರೆ ಮತದಾರರ ಸಂಖ್ಯೆ 22
ಒಟ್ಟು 2,34,079 ಮತದಾರರು ಹೊಸಕೋಟೆ ಕ್ಷೇತ್ರದಲ್ಲಿ ಇದ್ದಾರೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರ ವಿವರ
ಪುರುಷ ಮತದಾರರ ಸಂಖ್ಯೆ 1,05,520
ಮಹಿಳಾ ಮತದಾರರ ಸಂಖ್ಯೆ 1,06,646
19 ಇತರೆ ಮತದಾರರು ಸೇರಿದಂತೆ ಒಟ್ಟು 2,12,185 ಮತದಾರರು ಇದ್ದಾರೆ.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮತದಾರರ ಅಂಕಿಅಂಶ
ಪುರುಷ ಮತದಾರರ ಸಂಖ್ಯೆ 1,06,621
ಮಹಿಳಾ ಮತದಾರರ ಸಂಖ್ಯೆ 1,07,559
02 ಇತರೆ ಮತದಾರರು ಸೇರಿದಂತೆ ಒಟ್ಟು 2,14,182, ಮತದಾರರು ಇದ್ದಾರೆ.
ನೆಲಮಂಗಲ ವಿಧಾನಸಭಾ ಕ್ಷೇತ್ರದ ಮತದಾರರ ವಿವರ
ಪುರುಷ ಮತದಾರರ ಸಂಖ್ಯೆ 1,07,442
ಮಹಿಳಾ ಮತದಾರರ ಸಂಖ್ಯೆ 1,09,897
105 ಇತರೆ ಮತದಾರರು ಸೇರಿದಂತೆ ಒಟ್ಟು 2,17,444 ಮತದಾರರು ಇದ್ದಾರೆ.
ಜಿಲ್ಲೆಯ ಸೇವಾ ಮತದಾರರ ವಿವರ
ಜಿಲ್ಲೆಯಲ್ಲಿ ಒಟ್ಟು 130 ಸೇವಾ ಮತದಾರರು ಇದ್ದು
124 ಪುರುಷ ಮತದಾರರು ಹಾಗೂ 06 ಮಹಿಳಾ ಮತದಾರರು ಸೇರಿದಂತೆ ಒಟ್ಟು 130 ಮತದಾರರು ಇದ್ದಾರೆ.
ಜಿಲ್ಲೆಯ ಯುವ ಮತದಾರರ ಅಂಕಿಅಂಶ
13126 ಯುವಕರು, 11584 ಯುವತಿಯರು ಹಾಗೂ ಮೂವರು ಇತರೆ ಯುವ ಮತದಾರರು ಸೇರಿ ಜಿಲ್ಲೆಯಲ್ಲಿ ಒಟ್ಟು 24713 ಯುವ ಮತದಾರಿದ್ದಾರೆ.
ವಿಶೇಷಚೇತನ ಹಾಗೂ ಹಿರಿಯ ನಾಗರಿಕರ ಮತದಾರರ ಅಂಕಿಅಂಶ
ಜಿಲ್ಲೆಯಲ್ಲಿ ಒಟ್ಟು 12143 ವಿಕಲಚೇತನ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ 20354 ಮತದಾರರು ಇದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ವಿಕಲಚೇತನ ಮತದಾರರ ಸಂಖ್ಯೆ 3351, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮತದಾರರ ಸಂಖ್ಯೆ 4429
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವಿಕಲಚೇತನ ಮತದಾರರ ಸಂಖ್ಯೆ 3259, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮತದಾರರ ಸಂಖ್ಯೆ 5125
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ವಿಕಲಚೇತನ ಮತದಾರರ ಸಂಖ್ಯೆ 3327, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮತದಾರರ ಸಂಖ್ಯೆ 5009
ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ವಿಕಲಚೇತನ ಮತದಾರರ ಸಂಖ್ಯೆ 2206, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮತದಾರರ ಸಂಖ್ಯೆ 5791
ಮತದಾರರ ಗುರುತಿನ ಚೀಟಿ-ಎಪಿಕ್ (EPIC) ವಿವರ
ಹೊಸದಾಗಿ ನೊಂದಣಿಯಾಗಿರುವ ಯುವ ಮತದಾರರಿಗೆ ಮತ್ತು ನಮೂನೆ-8 ರಲ್ಲಿ ಅರ್ಜಿ ಸಲ್ಲಿಸಿರುವ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ಶೀಘ್ರ ಅಂಚೆ ಮೂಲಕ ಕಳುಹಿಸಲು ಕ್ರಮ ವಹಿಸಲಾಗಿದೆ
ಜಿಲ್ಲೆಯ ಮತಗಟ್ಟೆಗಳ ವಿವರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟಾರೆ 1137 ಮತಗಟ್ಟೆಗಳಿವೆ.
ನಗರ ಪ್ರದೇಶದಲ್ಲಿ 879 ಹಾಗೂ ಗ್ರಾಮೀಣ ಪ್ರದೇಶದಲ್ಲಿ 258 ಮತಗಟ್ಟೆಗಳಿವೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 293 ಮತಗಟ್ಟೆಗಳು
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 292 ಮತಗಟ್ಟೆಗಳು
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 276 ಮತಗಟ್ಟೆಗಳು
ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 276 ಮತಗಟ್ಟೆಗಳಿವೆ.
ಸೂಕ್ಷ್ಮ ಮತಗಟ್ಟೆಗಳು:-502
ಪ್ರತಿ ಮತಗಟ್ಟೆಗೆ ಜಿಲ್ಲೆಯಲ್ಲಿ ಸರಾಸರಿ 770 ಮತದಾರರಿರುತ್ತಾರೆ.
ವಿಶೇಷ ಮತಗಟ್ಟೆಗಳ ವಿವರ
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 05 ರಂತೆ 20 ಮಹಿಳಾ (ಸಖಿ) ಮತಗಟ್ಟೆಗಳು, 04 ವಿಕಲಚೇತನ ಮತಗಟ್ಟೆ, 04 ಯುವ ನೌಕರರ ಮತಗಟ್ಟೆ, 04 ಎತ್ನಿಕ್ ಮತಗಟ್ಟೆ ಹಾಗೂ 08 ಮಾದರಿ ಮತಗಟ್ಟೆಗಳಿವೆ.
ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಲಾಗಿರುವ ಇವಿಎಂ ಗಳ ಮತ್ತು ಸ್ಥಾಪಿಸಲಾಗಿರುವ ಭದ್ರತಾ ಕೊಠಡಿಗಳ ವಿವರ:-
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 352 ಬ್ಯಾಲೆಟ್ ಯೂನಿಟ್(ಬಿಯು), 352 ಕಂಟ್ರೋಲ್ ಯೂನಿಟ್(ಸಿಯು) ಹಾಗೂ 381 ವಿವಿಪ್ಯಾಟ್ ಹಂಚಿಕೆಯಾಗಿದೆ. ಭಧ್ರತಾ ಕೊಠಡಿ ವ್ಯವಸ್ಥೆಯನ್ನು ಹೊಸಕೋಟೆ ಟೌನ್‌ನ ದೊಡ್ಡಗತ್ತಿನಬ್ಬೆ ರಸ್ತೆಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ(ಪಿಯು) ಕಾಲೇಜಿನಲ್ಲಿ ಕಲ್ಪಿಸಲಾಗಿದೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 350 ಬ್ಯಾಲೆಟ್ ಯೂನಿಟ್, 350 ಕಂಟ್ರೋಲ್ ಯೂನಿಟ್ ಹಾಗೂ 380 ವಿವಿಪ್ಯಾಟ್ ಹಂಚಿಕೆಯಾಗಿದೆ.
ಭದ್ರತಾ ಕೊಠಡಿ ವ್ಯವಸ್ಥೆಯನ್ನು ದೇವನಹಳ್ಳಿ ಟೌನ್‌ನ ಬಿಬಿ ರಸ್ತೆಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ(ಪಿಯು) ಕಾಲೇಜಿನಲ್ಲಿ ಕಲ್ಪಿಸಲಾಗಿದೆ.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 331 ಬ್ಯಾಲೆಟ್ ಯೂನಿಟ್, 331 ಕಂಟ್ರೋಲ್ ಯೂನಿಟ್ ಹಾಗೂ 359 ವಿವಿಪ್ಯಾಟ್ ಹಂಚಿಕೆ ಮಾಡಲಾಗಿದೆ.
ಭಧ್ರತಾ ಕೊಠಡಿ ವ್ಯವಸ್ಥೆಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಮಾದಗೊಂಡನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಕಲ್ಪಿಸಲಾಗಿದೆ.
ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 331 ಬ್ಯಾಲೆಟ್ ಯೂನಿಟ್, 331 ಕಂಟ್ರೋಲ್ ಯೂನಿಟ್ ಹಾಗೂ 359 ವಿವಿಪ್ಯಾಟ್ ಹಂಚಿಕೆ ಮಾಡಲಾಗಿದೆ.
ಭದ್ರತಾ ಕೊಠಡಿ ವ್ಯವಸ್ಥೆಯನ್ನು ನೆಲಮಂಗಲ ಟೌನ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಪಿಸಲಾಗಿದೆ.
ಒಟ್ಟಾರೆ 1364 ಬ್ಯಾಲೆಟ್ ಯೂನಿಟ್(ಬಿಯು), 1364 ಕಂಟ್ರೋಲ್ ಯೂನಿಟ್(ಸಿಯು) ಹಾಗೂ 1479 ವಿವಿಪ್ಯಾಟ್ ಹಂಚಿಕೆಯಾಗಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ವಿವಿಧ ತಂಡಗಳಿಂದ ಇದುವರೆಗೂ ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಒಟ್ಟಾರೆ ಮೌಲ್ಯ 4,16,04,026 ರೂ.ಗಳು.
ಚುನಾವಣಾ ನೀತಿ ಸಂಹಿತೆ ಜಾರಿಗೆಯಾದ 29.03.2023 ರಿಂದ 28.04.2023 ರವರೆಗೆ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ವಶಪಡಿಸಿಕೊಂಡಿರುವ ವಸ್ತುಗಳ ವಿವರ
ನಗದು: ಮೌಲ್ಯ ರೂ. 65,47,507
ಮದ್ಯ: ಮೌಲ್ಯ ರೂ. 2,52,55,627 (90711.010ಲೀ)
ಮಾದಕ ವಸ್ತು: ಮೌಲ್ಯ ರೂ. 1,82,87,00 (27.899ಕೆಜಿ)
ಇತರೆ ವಸ್ತು: ಮೌಲ್ಯ ರೂ. 79,72,192
ಒಟ್ಟು ರೂ. 4,16,04,026.
ಮಸ್ಟರಿಂಗ್ ಮತ್ತು ಡಿ–ಮಸ್ಟರಿಂಗ್ ಕೇಂದ್ರಗಳ ವಿವರ:-
ಹೊಸಕೋಟೆ ವಿಧಾನಸಭಾ ಕ್ಷೇತ್ರ: ಹೊಸಕೋಟೆ ಟೌನ್‌ನ ಎಂವಿ ಎಕ್ಸ್ಟೆಂಶನ್‌ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ದೇವನಹಳ್ಳಿ ವಿಧಾನಸಭಾ ಕ್ಷೇತ್ರ: ದೇವನಹಳ್ಳಿ ಟೌನ್‌ನ ಬಿಬಿ ರಸ್ತೆಯ, ಹೊಸ ಬಸ್‌ಸ್ಟ್ಯಾಂಡ್ ಎದುರಿನ ಸರ್ಕಾರಿ ಕಿರಿಯ ಕಾಲೇಜು
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: ದೊಡ್ಡಬಳ್ಳಾಪುರ ತಾಲ್ಲೂಕಿನ ಮಾದಗೊಂಡನಹಳ್ಳಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರ
ನೆಲಮಂಗಲ ವಿಧಾನಸಭಾ ಕ್ಷೇತ್ರ: ನೆಲಮಂಗಲ ಟೌನ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಮತ ಏಣಿಕೆ ಕೇಂದ್ರ ಮತ್ತು ಭದ್ರತಾ ಕೊಠಡಿ:-
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭದ್ರತಾ ಕೊಠಡಿಗಳನ್ನು ಹಾಗೂ ಮತ ಎಣಿಕಾ ಕೊಠಡಿಗಳನ್ನು ದೇವನಹಳ್ಳಿ ತಾಲ್ಲೂಕಿನ ಪ್ರಸನ್ನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನಿಗದಿಪಡಿಸಲಾಗಿದೆ.