ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಚುಂಚೇಗೌಡರ 61ನೇ ಜನ್ಮದಿನಾಚರಣೆ ಪ್ರಯುಕ್ತ ಮಧುರೈ ಹೋಬಳಿಯಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಾಮಾಜಿಕ ಸೇವೆಗೆ ನಿಷ್ಠೆಯಿಂದ ತಮ್ಮ ಜೀವನವನ್ನು ಸಮರ್ಪಿಸಿದ ಚುಂಚೇಗೌಡರ 61ನೇ ಹುಟ್ಟುಹಬ್ಬವನ್ನು ದೊಡ್ಡಬಳ್ಳಾಪುರದ ಮಧುರೈ ಹೋಬಳಿಯಲ್ಲಿ ಅತ್ಯಂತ ಭಾವುಕ ಹಾಗೂ ಸೇವಾ ಚಟುವಟಿಕೆಗಳ ನಡುವೆ ಆಚರಿಸಲಾಯಿತು ಎಂದು ಚುಂಚೇಗೌಡರ ಅಭಿಮಾನಿಗಳು, ಅನುಯಾಯಿಗಳು ಹೇಳಿದರು.
ಹುಟ್ಟುಹಬ್ಬದ ದಿನವನ್ನು ಸಾಮಾನ್ಯವಾಗಿ ಆಚರಿಸದೇ, ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟು, ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಅವರು ಮತ್ತೊಮ್ಮೆ ತಮ್ಮ ಸೇವಾ ಮನೋಭಾವವನ್ನು ಸಾರಿದ್ದಾರೆ ಎಂದರು.
ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಈ ಶಿಬಿರಗಳಲ್ಲಿ ಭಾಗವಹಿಸಿದರು.
ಈ ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲರು ಚುಂಚೇಗೌಡರಿಗೆ ಹೃತ್ಪೂರ್ವಕವಾಗಿ ಶುಭಾಶಯಗಳನ್ನು ಕೋರಿ, ಅವರ ಆರೋಗ್ಯ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಮುಂದುವರಿದ ಯಶಸ್ಸಿಗಾಗಿ ಹಾರೈಸಿದರು.