ಚೀನಾದ ಮಕ್ಕಳಲ್ಲಿ ನ್ಯುಮೋನಿಯಾ: ಭಾರತದಲ್ಲಿ ಮನೆ‌ ಮಾಡಿದ‌ ಆತಂಕ: ಆತಂಕ ಬೇಡ, ಇರಲಿ ಮುನ್ನೆಚ್ಚರಿಕೆ: ಜನರು ವಹಿಸಬೇಕಾದ ಮುನ್ನೆಚ್ಚರಿಕೆಗಳು ಇಲ್ಲಿವೆ

ಚೀನಾದ ಉತ್ತರ ಭಾಗದ ಮಕ್ಕಳಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ ಪ್ರಕರಣಗಳು ರಾಜ್ಯದಲ್ಲಿ ಪಸರಿಸದಂತೆ ತಡೆಯಲು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಆತಂಕ ಬೇಡ, ಇರಲಿ ಮುನ್ನೆಚ್ಚರಿಕೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜನರು ವಹಿಸಬೇಕಾದ ಮುನ್ನೆಚ್ಚರಿಕೆಗಳು ಇಲ್ಲಿವೆ

•ಕೆಮ್ಮುವಾಗ, ಶೀನುವಾಗ ಕರವಸ್ತ್ರದಿಂದ ಬಾಯಿ, ಮೂಗೂ ಮುಚ್ಚಿಕೊಳ್ಳಬೇಕು.

• ಆಗಾಗ ಸೋಪಿನಿಂದ‌ ಕೈ ತೊಳೆಯಬೇಕು.

• ಜನ‌ಸಂದಣಿ‌ ಇರುವಕಡೆ ಮಾಸ್ಕ್ ಧರಿಸಬೇಕು.

• ಶೀತ-ಜ್ವರ ಬಾಧೆ ಇದ್ದರೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ಚಿಕಿತ್ಸೆ ಪಡೆಯಬೇಕು.

• ಎಳೆ ಮಕ್ಕಳು, ವೃದ್ಧರು, ಗರ್ಭಿಣಿಯರು, ಗಂಭೀರ ಸ್ವರೂಪದ ಅನಾರೋಗ್ಯ ಸಮಸ್ಯೆ ಇರುವವರ ಮೇಲೆ ವಿಶೇಷ ಗಮನ ಹರಿಸಬೇಕು.

• ಆರೋಗ್ಯ ಸಿಬ್ಬಂದಿ ಮಾಸ್ಕ್ ಧರಿಸಬೇಕು ಹಾಗೂ ಹಿಂದಿನ ಕೋವಿಡ್ ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲಿಸಬೇಕು.

ನ್ಯುಮೋನಿಯಾ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು ಶ್ವಾಸಕೋಶದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ರೋಗನಿರೋಧಕ ಶಕ್ತಿ ದುರ್ಬಲವಾಗಿರುವ ಮಕ್ಕಳು, ವಯಸ್ಕರು ಅಥವಾ ವೃದ್ಧರು ಈ ರೋಗಕ್ಕೆ ಸುಲಭವಾಗಿ ಬಲಿಯಾಗುತ್ತಾರೆ. ಕೆಮ್ಮು, ಶೀತ, ಜ್ವರ ಮತ್ತು ಎದೆಯಲ್ಲಿ ಕಫದ ಶೇಖರಣೆ ಇದಕ್ಕೆ ಕಾರಣವಾಗಿದೆ. ಈ ಅಪಾಯಕಾರಿ ನ್ಯುಮೋನಿಯಾ ಕಾಯಿಲೆ ಚೀನಾದಲ್ಲಿ ವೇಗವಾಗಿ ಹರಡುತ್ತಿದೆ.

Leave a Reply

Your email address will not be published. Required fields are marked *