ಚೀನಾದಲ್ಲಿ ಮತ್ತೆ ಕೊರೊನಾ ರಣಕೇಕೆ; ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬರುವ ಶೇಕಡಾ 2 ರಷ್ಟು ಪ್ರಯಾಣಿಕರಿಗೆ ಕೊರೊನಾ ಟೆಸ್ಟ್-ಡಿಹೆಚ್ಒ ಡಾ.ಬಿ.ಕೆ.ರಾಜೇಂದ್ರ

ಕೊರೋನಾ ವೈರಸ್ ನಿಂದ ದೇಶ ಈಗೀಗ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ಮತ್ತೆ ಚೀನಾ ದೇಶದಲ್ಲಿ ಓಮಿಕ್ರಾನ್ ಉಪತಳಿ BF.7 ರೂಪಾಂತರ ತಳಿ ತನ್ನ ಪ್ರಭಾವ ಬೀರುತ್ತಿದೆ.

ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ ಹೆಚ್ಚಾಗಿದೆ, ಓಮಿಕ್ರಾನ್ ಉಪತಳಿ BF 7 ರೂಪಾಂತರ ತಳಿಯಿಂದ ಚೀನಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ, ಇದರಿಂದ ಮುನ್ನೇಚ್ಚರಿಕಾ ಕ್ರಮವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವ ಶೇಕಡಾ 2 ರಷ್ಟು ಪ್ರಯಾಣಿಕರ ಸ್ಯಾಂಪಲ್ಸ್ ಗಳ ಸಂಗ್ರಹಣೆ ಮಾಡಿ ತಪಾಸಣೆ ಮತ್ತು ಗಂಟಲು ದ್ರವ ಸಂಗ್ರಹಣೆಯ ಸ್ಯಾಂಪಲ್ಸ್ ಗಳನ್ನ ಲ್ಯಾಬ್ ಗೆ ಕಳಿಸಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜೇಂದ್ರ ಮಾಹಿತಿ ನೀಡಿದರು.

ಸ್ಯಾಂಪಲ್ಸ್ ಗಳ ಸಂಗ್ರಹಣೆಗಾಗಿ ಏರ್ ಪೋರ್ಟ್ ನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಒಂದು ಪಾಳಿಯಲ್ಲಿ ಇಬ್ಬರು ಲ್ಯಾಬ್ ಟೆಕ್ನಿಷಿಯನ್ ಒಬ್ಬರು ಡಾಟಾ ಎಂಟ್ರಿ ಆಪರೇಟರ್ ಕೆಲಸ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಮೇಲೆ ಸ್ಯಾಂಪಲ್ಸ್ ಗಳ ಸಂಗ್ರಹಣೆ ಹೆಚ್ಚು ಮಾಡಲಾಗುವುದು, ಇದಕ್ಕಾಗಿ ಹೆಚ್ಚು ಸಿಬ್ಬಂದಿಗಳ ನೇಮಕ ಸಹ ಮಾಡಲಾಗುವುದು ಸದ್ಯ ಸರ್ಕಾರದ ನಿರ್ದೇಶನಕ್ಕಾಗಿ ಕಾಯಲಾಗುತ್ತಿದೆ ಎಂದರು.

ಡಿಸೆಂಬರ್ 19ಕ್ಕೆ ಭಾರತದಲ್ಲಿ ಸದ್ಯ 378 ಕೋವಿಡ್ ಪ್ರಕರಣಗಳಿವೆ, ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಮೇಲೆ ನಿಗಾ ಇಡಲಾಗಿದೆ ಎಂದರು.

Leave a Reply

Your email address will not be published. Required fields are marked *