ಚಿರತೆ ದಾಳಿಗೆ ಹಸು ಬಲಿಯಾಗಿರುವ ಘಟನೆ ತಡರಾತ್ರಿ ತಾಲೂಕಿನ ತೂಬಗೆರೆ ಹೋಬಳಿಯ ದೊಡ್ಡರಾಯಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಮುನೇಗೌಡ ಎಂಬುವವರು ಎಂದಿನಂತೆ ತೋಟದ ಶೆಡ್ ನಲ್ಲಿ ಹಸುವನ್ನು ಕಟ್ಟಿ ಹಾಕಿ ಮನೆಗೆ ಬಂದಿದ್ದರು. ತಡರಾತ್ರಿ ಶೆಡ್ ಗೆ ನುಗ್ಗಿದ ಚಿರತೆ ಸುಮಾರು 50 ಸಾವಿರ ರೂಪಾಯಿ ಬೆಲೆ ಬಾಳುವ ಹಸುವನ್ನು ಕೊಂದು ಹಾಕಿದೆ. ಇದರಿಂದ ರೈತ ಮುನೇಗೌಡ ಸಂಷ್ಟದಲ್ಲಿದ್ದಾರೆ.
ನಂದಿ ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಗಳಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಚಿರತೆ ಸೆರೆಗೆ ಬೋನ್ ಅಳವಡಿಸುವಂತೆ ಸ್ಥಳೀಯರು ಹಾಗೂ ರೈತರು ಒತ್ತಾಯಿಸಿದ್ದಾರೆ.