ಕಾಡಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಬಲಿಪಡೆದುಕೊಂಡಿರುವ ಘಟನೆ ತಾಲೂಕಿನ ಭೂಮೇನಹಳ್ಳಿ ಬಳಿ ಇಂದು ನಡೆದಿದೆ.
ಎಂದಿನಂತೆ ರೈತ ಆನಂದ ಮೂರ್ತಿ ತನ್ನ ಹಸುಗಳನ್ನು ಮೇಯಿಸಲು ಕಾಡಿಗೆ ಬಿಟ್ಟಿರುತ್ತಾರೆ. ಯಾರೂ ಇಲ್ಲದ ಸಮಯದಲ್ಲಿ ಹೊಂಚು ಹಾಕಿ ಸುಮಾರು 50-60 ಸಾವಿರ ಬೆಲೆ ಬಾಳುವ ಹಸುವಿನ ಮೇಲೆ ಎರಗಿ ಬಲಿ ಪಡೆದ ಚಿರತೆ. ಆನಂದ ಮೂರ್ತಿಗೆ ಸೇರಿದ ಮೂರು ಹಸುಗಳನ್ನು ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಇದರಿಂದ ರೈತ ಸಂಕಷ್ಟದಲ್ಲಿ ಜೀವನ ನಡೆಸುವ ಪರಿಸ್ಥಿತಿ ಏರ್ಪಟ್ಟಿದೆ. ಮೂರು ಹಸುಗಳನ್ನು ಕಳೆದುಕೊಂಡ ರೈತನಿಗೆ ಇದೂವರೆಗೂ ಯಾವ ಇಲಾಖೆಯಿಂದ ಪರಿಹಾರ ಸಿಕ್ಕಿಲ್ಲ.
ಪದೇ ಪದೇ ಚಿರತೆ ದಾಳಿಯಿಂದ ರೈತರು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಕೂಡಲೇ ಚಿರತೆಯನ್ನು ಸೆರೆ ಹಿಡಿದು ನೆಮ್ಮದಿ ಜೀವನ ನಡೆಸಲು ಅನುವುಮಾಡಿಕೊಡಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.