ಮಧ್ಯಪ್ರದೇಶದ ದೇವಸ್ ಜಿಲ್ಲೆಯಲ್ಲಿ ಚಿರತೆಯನ್ನು ಸಾಮಾನ್ಯ ನಾಯಿ ಜೊತೆ ಬರುವ ಹಾಗೆ ಜನರು ನಡೆದುಕೊಂಡು ಬರುತ್ತಿರುವುದು, ಸೆಲ್ಫಿ ತೆಗೆದುಕೊಳ್ಳುತ್ತಿರುವುದು, ಸವಾರಿ ಮಾಡಲು ಹೋಗುವ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ವಿಡಿಯೋ ನೋಡಿದಾಗ ಚಿರತೆ ಬಹುಶಃ ಜನರ ಗುಂಪಿನಿಂದ ದಾಳಿಗೊಳಗಾಗಿ ನಿತ್ರಾಣವಾಗಿರುಬಹುದು ಅಥವಾ ಖಾಯಿಲೆಗೆ ತುತ್ತಾಗಿರುವಂತೆ ಕಾಣಿಸುತ್ತಿದೆ.
ಕೂಡಲೇ ಅರಣ್ಯ ಇಲಾಖಾಧಿಕಾರಿಗಳು ಧಾವಿಸಿ ಅನಾರೋಗ್ಯ ಪೀಡಿತ ಚಿರತೆಯನ್ನ ಭೋಪಾಲ್‌ನ ಪಶು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.