ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಝಿಕಾ ವೈರಸ್ ಪತ್ತೆ…! ಜನರಲ್ಲಿ ಆತಂಕ: ಎಚ್ಚೆತ್ತ ಆರೋಗ್ಯ ಇಲಾಖೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಹೋಬಳಿಯ ತಲಕಾಯಲಬೆಟ್ಟ ವ್ಯಾಪ್ತಿಯಲ್ಲಿ  ಝಿಕಾ ವೈರಸ್ ಪತ್ತೆಯಾಗಿದೆ.

ಇತ್ತೀಚೆಗೆ ಕೇರಳದಲ್ಲಿ ಕಾಣಿಸಿಕೊಂಡಿದ್ದ ಈ ವೈರಸ್ ಈಗ ಆಂಧ್ರ ಪ್ರದೇಶದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವುದು ಜನರಲ್ಲಿ ತೀವ್ರ ಆತಂಕ ಉಂಟು ಮಾಡಿದೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಸೊಳ್ಳೆಗಳನ್ನು ಹಿಡಿದು ಪರೀಕ್ಷೆಗೆ ಒಳಪಡಿಸಿದಾಗ ಝಿಕಾ ವೈರಸ್‌ ಪತ್ತೆಯಾಗಿದೆ. ಅದೃಷ್ಟವಶಾತ್ ಜನರಿಗೆ ಹರಡಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಮಹೇಶ ಕುಮಾರ್ ತಿಳಿಸಿದರು.

ಸದ್ಯ ಝಿಕಾ ವೈರಸ್ ಕಂಡು ಬಂದಿರುವ ತಲಕಾಯಲಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ತಂಡ ಬೀಡು ಬಿಟ್ಟು ಮನೆ ಮನೆ ಸಮೀಕ್ಷೆ, ರಕ್ತ ಸಂಗ್ರಯ ಜೊತೆಗೆ ವೈರಸ್ ಹರದಡಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.


ಝಿಕಾ ವೈರಸ್ ಸೋಂಕು ಹರಡುವಿಕೆ

ಝಿಕಾ ವೈರಸ್ ಸೋಂಕು ಸೊಳ್ಳೆಯಿಂದ ಹರಡುವ ವೈರಲ್ ಸೋಂಕಾಗಿದ್ದು, ಇದು ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ ಆದರೆ ಜ್ವರ, ದದ್ದು, ಕೀಲು ನೋವು ಅಥವಾ ಕಣ್ಣಿನ ಬಿಳಿಭಾಗವನ್ನು ಆವರಿಸುವ ಪೊರೆಯ ಸೋಂಕಿಗೆ ಕಾರಣವಾಗಬಹುದು (ಕಾಂಜಂಕ್ಟಿವಿಟಿಸ್, ಅಥವಾ ಪಿಂಕಿಐ). ಗರ್ಭಿಣಿ ಮಹಿಳೆಯಲ್ಲಿ ಝಿಕಾ ವೈರಸ್ ಸೋಂಕು ಮೈಕ್ರೊಸೆಫಾಲಿ (ಗಂಭೀರ ಜನ್ಮ ದೋಷ) ಮತ್ತು ಮಗುವಿನ ಕಣ್ಣು ಮತ್ತು ಇತರ ಅಸಹಜತೆಗಳನ್ನು ಉಂಟುಮಾಡಬಹುದು.

Leave a Reply

Your email address will not be published. Required fields are marked *