ಊರಿಗೆ ಊರೇ ಸೇರಿದ್ರು, ಹುಲಿಯೊಂದು ಯಾರ ಉಸಾಬರಿಯೂ ಬೇಡವೆಂದು ಗಂಟೆ ಗಟ್ಟಲೆ, ಚಳಿಗಾಲದ ಎಳೆ ಬಿಸಿಲು ಕಾಯುತ್ತಾ ಕಾಲ ಕಳೆದ ಅಪರೂಪದ ಘಟನೆ ಉತ್ತರ ಪ್ರದೇಶದ ಪಿಲಿಬಿತ್ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮವಾದ ಅಠಕೋನಾ ಗ್ರಾಮದಲ್ಲಿ ನಡೆದಿದೆ.
ಅಲ್ಲಿನ ಸ್ಥಳೀಯ ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ 2- 3 ವರ್ಷದ ಹೆಣ್ಣು ಹುಲಿಯಾದ ಇದನ್ನು ಅಂತಿಮವಾಗಿ ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿದು ಕಾಡಿನ ಸಹಜ ಆವಾಸಸ್ಥಾನಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.