ಚಲಿಸುವ ಗೂಡ್ಸ್ ರೈಲಿಗೆ ಹತ್ತಲು ಹೋಗಿ ಯಡವಟ್ಟು: ಚಕ್ರಕ್ಕೆ ಕಾಲಿನ ಪಾದ‌ ಸಿಲುಕಿ ನುಜ್ಜುಗುಜ್ಜು

ಚಲಿಸುವ ಗೂಡ್ಸ್ ರೈಲಿಗೆ ಹತ್ತಲು ಹೋಗಿ ಯುವಕನೋರ್ವ ಯಡವಟ್ಟು ಮಾಡಿಕೊಂಡಿದ್ದಾನೆ. ರೈಲಿಗೆ ಹತ್ತಲು ಹೋಗಿ ಆಯಾತಪ್ಪಿ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ಕೂಡಲೇ ರೈಲಿನ ಚಕ್ರಕ್ಕೆ ಕಾಲಿನ ಪಾದ‌ ಸಿಲುಕಿದೆ. ಈ ಹಿನ್ನೆಲೆ ಕಾಲಿನ ಪಾದ ನುಜ್ಜುಗುಜ್ಜಾಗಿದೆ.

ದೊಡ್ಡಬಳ್ಳಾಪುರ ಮೂಲದ ಹೇಮಂತ್ ಕುಮಾರ್ (28) ಯಡವಟ್ಟು ಮಾಡಿಕೊಂಡ ಯುವಕ.

ಕತ್ತಲಲ್ಲಿ ಹಳಿ ದಾಟಲು ಹೋಗಿದ್ದಾನೆ. ಹಳಿಯಲ್ಲಿ ಗೂಡ್ಸ್ ರೈಲು ನಿಂತಿತ್ತು. ಈ ಯುವಕ ದುರಾದೃಷ್ಟವಷಾತ್ ಗೂಡ್ಸ್ ರೈಲು ಹತ್ತಿದಾಗ ರೈಲು ಮುಂದಕ್ಕೆ ಚಲಿಸಿದೆ. ತಕ್ಷಣ ಈ ಯುವಕ ಕೆಳಗೆ ಬಿದ್ದಿದ್ದಾನೆ. ಆಗ ಕಾಲು ರೈಲಿಗೆ ಸಿಲುಕಿದೆ ಎಂದು ತಿಳಿದುಬಂದಿದೆ.

ಘಟನೆ ದೊಡ್ಡಬಳ್ಳಾಪುರದ ರೈಲ್ವೆ ನಿಲ್ದಾಣದ ಬಳಿ ಇಂದು ಮುಂಜಾನೆ ಸುಮಾರು 3 ಗಂಟೆಯಲ್ಲಿ ನಡೆದಿದೆ. ವಿಚಾರ ತಿಳಿದ ರೈಲ್ವೆ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ‌ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ.

ರೈಲ್ವೆ ಅಧಿಕಾರಿಗಳಿಂದ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!