ಚಲಿಸುತ್ತಿದ್ದ ಕಾರು ಇದ್ದಕ್ಕಿದಂತೆ ಹೊತ್ತಿ ಉರಿದಿರುವ ಘಡನೆ ಇಂದು ಸಂಜೆ ತಾಲ್ಲೂಕಿನ ಹೊರವಲಯದ ಮಾರಸಂದ್ರ ಅಪಾರ್ಟ್‌ಮೆಂಟ್ ಬಳಿ ನಡೆದಿದೆ.
ಬೆಂಕಿ ಹೊತ್ತಿಕೊಂಡ ಕೂಡಲೇ ಕಾರಿನಲ್ಲಿದ್ದವರು ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಗೌರಿಬಿದನೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಾರು ಇದ್ದಕ್ಕಿದಂತೆ ಹೊತ್ತಿ ಉರಿದಿದೆ, ಕಾರಿನ ಮೇಲೆ ಲಾಯರ್ ಸಿಂಬಲ್ ಇದ್ದು, ವಕೀಲರ ಕುಟುಂಬ ಕಾರಿನಲ್ಲಿದ್ದ ಮಾಹಿತಿ ತಿಳಿದು ಬಂದಿದೆ.
ನೋಡು ನೋಡುತ್ತಿದ್ದಂತೆ ಕಾರು ಹೊತ್ತಿ ಉರಿದಿದ್ದು, ಇಂಜಿನ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ನಡೆದ ಸ್ಥಳ ಬೆಂಗಳೂರು ಹಿಂದೂಪುರ ಹೆದ್ದಾರಿಯಾದ ಕಾರಣ ಸ್ಥಳದಲ್ಲಿ ಕಿ.ಮೀ ವರೆಗೂ ರಸ್ತೆ ಸಂಚಾರ ಬಂದ್ ಆಗಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ರಸ್ತೆ ಸಂಚಾರವನ್ನು ಸುಗಮಗೊಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.