ಚರ್ಮಗಂಟು ರೋಗ: ಘಾಟಿ ದನಗಳ ಜಾತ್ರೆಗೆ ನಿರ್ಬಂಧ; ಪೊಲೀಸ್ ಸುಪರ್ದಿಯಲ್ಲಿ ರಾಸುಗಳ ಎತ್ತಂಗಡಿ; ರೈತರ ಸ್ವಯಂಪ್ರೇರಿತ ದನಗಳ ಜಾತ್ರೆಗೆ ಬ್ರೇಕ್

ರಾಜ್ಯಾದ್ಯಂತ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಉಲ್ಬಣಗೊಂಡ ಹಿನ್ನೆಲೆ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿಯ ದನಗಳ ಜಾತ್ರೆಗೆ ಸೇರಿದ್ದ ಜಾನುವಾರುಗಳನ್ನು ಜಿಲ್ಲಾಡಳಿತದ ಆದೇಶದ ಮೇರೆಗೆ ವಾಪಸ್ ಕಳುಹಿಸಲಾಯಿತು.

ಪೊಲೀಸ್ ಬಿಗಿ‌ ಭದ್ರತೆಯಲ್ಲಿ ಪಶು ಇಲಾಖೆ ಅಧಿಕಾರಿಗಳು, ವೈದ್ಯರು, ತೂಬಗೆರೆ ಹೋಬಳಿ ಉಪತಹಶೀಲ್ದಾರ್, ಘಾಟಿ‌ಕ್ಷೇತ್ರದ ಸಿಬ್ಬಂದಿ ರೈತರಿಗೆ ತಿಳಿ ಹೇಳಿ ಆಟೋ ಪ್ರಚಾರ ಮಾಡಿ ರಾಸುಗಳೊಂದಿಗೆ ರೈತರನ್ನು ಹಿಂದಕ್ಕೆ ಕಳುಹಿಸಲಾಯಿತು.

ಜ.31ರವರೆಗೆ ಜಾನುವಾರು ಜಾತ್ರೆ‌ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ ರೈತರು ಸ್ವಯಂಪ್ರೇರಿತವಾಗಿ ಪೆಂಡಾಲ್ ಹಾಕಿ ಜಾನುವಾರು ಕರೆತಂದಿದ್ದರು. ಕಳೆದ‌ ಮೂರು ದಿನಗಳಿಂದ ಜಾನುವಾರು ಕರೆತರದಂತೆ ಪಶು‌ ವೈದ್ಯರು, ಅಧಿಕಾರಿಗಳು ಮನವಿ ಮಾಡಿದ್ದರೂ ರೈತರು ಪಟ್ಟು ಸಡಿಲಿಸಿರಲಿಲ್ಲ. ಜಿಲ್ಲಾಡಳಿತದ ಸೌಕರ್ಯ ನಮಗೆ ಬೇಡ, ರಾಸುಗಳನ್ನು ಮಾರಾಟ ಮಾಡಲು ಅವಕಾಶ ಕೊಡಬೇಕೆಂಬುದು ರೈತರ ವಾದವಾಗಿತ್ತು.

ಮಾಧ್ಯಮದವರೊಂದಿಗೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಶು‌ ಇಲಾಖೆ ಉಪ ನಿರ್ದೇಶಕ ಡಾ.ಜಿ.ಎಂ.ನಾಗರಾಜ್ ಅವರು, ಗ್ರಾಮಾಂತರ ಜಿಲ್ಲೆಯಲ್ಲಿ 1 ಲಕ್ಷ 62 ಸಾವಿರ ರಾಸುಗಳಿವೆ, ಚರ್ಮಗಂಟು ರೋಗ ತಡೆಗಟ್ಟಲು ರೈತರ ಮನೆ ಮನೆಗೆ ತೆರಳಿ ರಾಸುಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ರೋಗಲಕ್ಷಣಗಳು ಕಂಡುಬಂದಲ್ಲಿ ಲಸಿಕೆ ನೀಡಲಾಗುತ್ತಿದೆ. ಚರ್ಮಗಂಟು ರೋಗದಿಂದ ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 204 ರಾಸುಗಳು ಸಾವನ್ನಪ್ಪಿವೆ. ಆದ್ದರಿಂದ ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಈ ದನಗಳ ಜಾತ್ರೆಗೆ ಇಲಾಖೆಯಿಂದ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.

ರೋಗ ಪೀಡಿತ ರಾಸುವಿನ ಮೇಲೆ ಕುಳಿತ ನೊಣ ಆರೋಗ್ಯಯುತ ರಾಸುವಿನ ಮೇಲೆ ಕುಳಿತರೆ ತಕ್ಷಣ ಆ ರಾಸುವಿಗೂ ಕಾಯಿಲೆ ಬರುತ್ತದೆ, ಗಾಳಿ, ನೀರು, ಮೇವು, ಸೊಳ್ಳೆಗಳಿಂದಲೂ‌ ರೋಗ ಹರಡುತ್ತದೆ. ಈಗಾಗಲೇ ಈ‌ ಜಾತ್ರೆಯಲ್ಲಿ ನಾಲ್ಕೈದು ಜೊತೆ ರಾಸುಗಳಲ್ಲಿ ಚರ್ಮಗಂಟು ರೋಗ ಕಂಡುಬಂದಿದೆ. ಇದು ಇನ್ನೂ ಹೆಚ್ಚು ಹಬ್ಬಿ ರಾಸುಗಳಿಗೆ ಬಾಧಿಸುವುದು ಬೇಡ ಎಂದು ಈ ಜಾತ್ರೆಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.

ರೈತರ ಸ್ವಯಂಪ್ರೇರಿತ ದನಗಳ ಜಾತ್ರೆ ಪ್ರಾರಂಭವಾಗಿ ಮೂರ್ನಾಲ್ಕು ದಿನಗಳ ಬಳಿಕ ಇಂದು ಅಧಿಕಾರಿಗಳು ಸ್ಥಳಕ್ಕೆ ಬಂದು ಜಾಗ ಖಾಲಿ ಮಾಡುವಂತೆ ರೈತರಿಗೆ ಸೂಚಿಸಿದಾಗ ರೈತರಿಗೆ ದಿಕ್ಕು ತೋಚದಂತಾಗಿ ಪರದಾಡಿದರು. ಬೇರೆ ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ರೈತರು ರಾಸುಗಳನ್ನು ಸಾವಿರಾರು ರೂಪಾಯಿ ಖರ್ಚು ಮಾಡಿ ಕರೆತಂದಿದ್ದರು.

ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಜಾನುವಾರು ಜಾತ್ರೆ ಜ.16ರಿಂದಲೇ ರೈತರು‌ ಜಾನುವಾರು ಕರೆತರಲು ಬಿಟ್ಟು ಶುಕ್ರವಾರ ಏಕಾಏಕಿ ರೈತರನ್ನು ತೆರವು ಮಾಡಿದ‌ ಜಿಲ್ಲಾಡಳಿತದ ಕ್ರಮ ರೈತರ ಟೀಕೆಗೆ ಗುರಿಯಾಗಿದೆ. ಜಾನುವಾರು‌ ನಿಷೇಧ ಹೇರಿದ್ದ ಜಿಲ್ಲಾಡಳಿತ ಅರಂಭದಲ್ಲೇ ರಾಸುಗಳಿಗೆ ನಿರ್ಬಂಧ ಹೇರಬೇಕಿತ್ತು.‌ ಸಾವಿರಾರು ರೂಪಾಯಿ ಖರ್ಚು‌ಮಾಡಿ ದೂರದಿಂದ‌ ಬಂದ ರೈತರನ್ನು ಜಾತ್ರೆ ಮುಕ್ತಾಯಕ್ಕೆ ಎರಡು ದಿನ ಇರುವಂತೆ ವಾಪಸ್ ಕಳುಹಿಸುತ್ತಿರುವುದು‌ ಸರಿಯಲ್ಲ.‌ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರಿಗೆ‌ ಸಾವಿರಾರು ರೂಪಾಯಿ‌ ನಷ್ಟವಾಗಿದೆ. ಜೊತೆಗೆ ರೋಗವು ಹಬ್ಬುವಂತಾಗಿದೆ‌ ಎಂದು ರೈತರು ಟೀಕಿಸಿದ್ದಾರೆ.

Ramesh Babu

Journalist

Recent Posts

ವಿ. ಶಾಂತಕುಮಾರ್ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿ. ಶಾಂತಕುಮಾರ್ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಕಾಂಗ್ರೆಸ್…

4 hours ago

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ದರ್ಗಾಜೋಗಿಹಳ್ಳಿ ಸಮೀಪದ ಹೋಟೆಲ್ ನಲ್ಲಿ…

5 hours ago

ಡಿಪಿಎಲ್ ಸೀಸನ್-1  ದೊಡ್ಡಬಳ್ಳಾಪುರ ಪ್ರೀಮಿಯರ್ ಲೀಗ್ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್: ಏ.1ರಿಂದ ನೋಂದಣಿ: ಮೇ.9, 10ಕ್ಕೆ ಕ್ರಿಕೆಟ್ ಟೂರ್ನಮೆಂಟ್

ಡಿಪಿಎಲ್ ಸೀಸನ್-1  ದೊಡ್ಡಬಳ್ಳಾಪುರ ಪ್ರೀಮಿಯರ್ ಲೀಗ್ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್ ನ್ನು ಮೇ.9 ಮತ್ತು 10ರಂದು ಆಯೋಜನೆ ಮಾಡಲಾಗಿದೆ...…

5 hours ago

ಕರ್ನಾಟಕದ ಶೈಕ್ಷಣಿಕ ಭಾಷಾ ನೀತಿ…..

ಭಾಷೆ, ಪ್ರಾದೇಶಿಕತೆ, ರಾಷ್ಟ್ರೀಯತೆ ಮತ್ತು ಧರ್ಮದ ಸಂಘರ್ಷ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಸ್ವಾರ್ಥದ ಅನುಕೂಲಕರ ರಾಜಕೀಯ..... ಕನ್ನಡ ತಾಯಿ…

9 hours ago

ಮಹಾವೀರ ಜಯಂತಿ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಇಂದು ನಾಡಿನಾದ್ಯಂತ ಮಹಾವೀರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಅದೇರೀತಿ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ…

20 hours ago

ನಾನು ಯಾರ ಜಮೀನು ಕಬಳಿಕೆ‌ ಮಾಡಿಲ್ಲ- ಕಾನೂನಾತ್ಮಕವಾಗಿ ಜಮೀನು ಖರೀದಿ ಮಾಡಿದ್ದೇನೆ- ನನ್ನ ಏಳಿಗೆ ಸಹಿಸದವರಿಂದ ನನ್ನ ಮೇಲೆ ಹಲ್ಲೆ ನಡೆದಿದೆ- ಕಾನೂನು ಹೋರಾಟ ಮಾಡಿ ಗೆಲ್ಲುವೆ- ವಕೀಲ ಪ್ರತಾಪ್

ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…

21 hours ago