ಚಂಜಿಮಲೆ ಡೇರಿಗೆ 3.65 ಲಕ್ಷ ನಿವ್ವಳ ಲಾಭ- ಬಿ.ರಮೇಶ್

ಕೋಲಾರ: ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಕೋಲಾರ ಜಿಲ್ಲಾ ಹಾಲು ಒಕ್ಕೂಟವನ್ನು ಬಳಪಡಿಸಬೇಕೆಂದು ಚಂಜಿಮಲೆ ಡೇರಿ ಅಧ್ಯಕ್ಷ ಹಾಗೂ ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ಬಿ.ರಮೇಶ್ ಹಾಲು ಉತ್ಪಾದಕರಲ್ಲಿ ಮನವಿ ಮಾಡಿದರು.

ತಾಲೂಕಿನ ಚಂಜಿಮಲೆ ಹಾಲು ಉತ್ಪಾಕದರ ಸಂಘದಲ್ಲಿ ಶುಕ್ರವಾರ 2023-24 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸದರಿ ಹಾಲು ಡೇರಿ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಅರ್ಥಿಕವಾಗಿ ಬಲಗೊಂಡಿದ್ದು ಈ ಬಾರಿ ೧೦ ಲಕ್ಷಕ್ಕೂ ಹೆಚ್ಚು ವ್ಯಾಪಾರ ಲಾಭ ಗಳಿಸಿದ್ದು ಅದರಲ್ಲಿ 3.65 ನಿವ್ವಳ ಲಾಭ ಬಂದಿದೆ ಹಾಲು ಉತ್ಪಾದಕರು ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರ ಸಹಕಾರ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಒಕ್ಕೂಟದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಹಾಲು ಉತ್ಪಾದಕರಿಗೆ ತಿಳಿಸಿದರು.

ಹಾಲು ಉತ್ಪಾದಕರು ಡೇರಿಗೆ ಉತ್ತಮ ಹಾಲನ್ನು ಕೊಡುವುದರಿಂದ ಸಂಘದ ಜೊತೆಗೆ ಗ್ರಾಮವು ಅಭಿವೃದ್ಧಿಯಾಗುತ್ತದೆ ಮುಂದಿನ ದಿನಗಳಲ್ಲಿ ಗ್ರಾಮದ ಪ್ರತಿಯೊಬ್ಬರಿಗೂ ಡಿಸಿಸಿ ಬ್ಯಾಂಕ್ ನಿಂದ ಹಸುಗಳನ್ನು ಖರೀದಿಸಲು ಸಾಲ ಕೊಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೋಲಾರ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಮಹೇಶ್, ವಿಸ್ತರಣಾಧಿಕಾರಿ ಎಸ್ ಸಮೀರ್ ಪಾಷಾ, ಸಂಘದ ನಿರ್ದೇಶಕರಾದ ಎನ್. ಶ್ರೀರಾಮಪ್ಪ, ಇ.ಚಂದ್ರಪ್ಪ, ಸಿ.ಎನ್ ಗುರುಮೂರ್ತಿ, ಕೆ ಶ್ರೀನಿವಾಸ್, ಎಂ ನರಸಿಂಹಪ್ಪ, ಪ್ರಸನ್ನ, ಅಲ್ಲಬಕಾಶ್, ಬಿ ರಾಜಪ್ಪ, ಡಿ.ಮುನೇಶ್, ಪುಷ್ಪ, ಗೌರಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಾಲಪ್ಪ, ಸಿಎಂ ದೇವರಾಜ್, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಮುಖಂಡರಾದ ಬಾಲಪ್ಪ, ಕೆಂಪಣ್ಣ, ಎಂ ಶ್ರೀನಿವಾಸ್, ಎಂ ವೆಂಕಟೇಶ್, ಹಾಗೂ ಸಂಘದ ಕಾರ್ಯದರ್ಶಿ ಸಿ ಎಂ ಪಾಪಣ್ಣ, ಹಾಲು ಪರಿವೀಕ್ಷಕ ಸಿ.ಎಂ ಶ್ರೀನಿವಾಸಯ್ಯ, ಸಹಾಯಕ ಮೋಹನ್, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!