ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಿಕೆಶಿ ದಂಪತಿ ಸಮೇತ ಭೇಟಿ ನೀಡಿ ದೇವರ ದರ್ಶನ ಪಡೆದರು. ಸುಮಾರು ಒಂದು ಗಂಟೆಗೂ ಅಧಿಕ ಪೂಜೆಯಲ್ಲಿ ಕುಳಿತುಕೊಂಡಿದ್ದರು. ಈ ಹಿನ್ನೆಲೆ ಕ್ಯೂನಲ್ಲಿ ಭಕ್ತಾಧಿಗಳು ನಿಂತಲ್ಲೇ ನಿಂತಿದ್ದರು.
ಭಕ್ತಾಧಿಗಳು ಮಕ್ಕಳು, ವೃದ್ಧರು, ಮಹಿಳೆಯರು ದೇವರ ದರ್ಶನ ಪಡೆಯಲು ಕಾದುಕುಳಿತಿರುವ ದೃಶ್ಯ ಕಂಡುಬಂತು.
ಇಂದು ಭಾನುವಾರ ರಜಾ ದಿನದಂದು ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಇವರು ಕೆಲಕಾಲ ಕ್ಯೂನಲ್ಲೇ ನಿಂತು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.