ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕುಮಾರ ಷಷ್ಠಿ ಆಚರಣೆ
ದಕ್ಷಿಣ ಭಾರತದ ಪ್ರಮುಖ ನಾಗರಾಧನೆಯ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ, ಇಂದು ಘಾಟಿ ಕ್ಷೇತ್ರದಲ್ಲಿ ಕುಮಾರ ಷಷ್ಠಿಯನ್ನ ಭಕ್ತರು ಸಂಭ್ರಮದಿಂದ ಆಚರಣೆ ಮಾಡಿದರು.
2022ರ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವನ್ನ ಡಿಸೆಂಬರ್ 28 ರಂದು ಆಚರಣೆ ಮಾಡಲಾಗಿತು, ಚಂಪಾ ಷಷ್ಠಿಯಂದ್ದು ನಡೆದ ಬ್ರಹ್ಮ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದರು, ಇದಾದ ಒಂದು ತಿಂಗಳ ನಂತರ ನಡೆಯುವ ಕುಮಾರ ಷಷ್ಠಿ ಸಹ ಬಹಳ ಸಂಭ್ರಮದಿಂದ ಆಚರಣೆ ಮಾಡಲಾಗಿತ್ತು.
ಇಂದು ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರೆವೆರಿತು. ಭಕ್ತರು ಬೆಳಗ್ಗೆಯಿಂದಲೇ ಕ್ಷೇತ್ರಕ್ಕೆ ಬಂದು ಸ್ವಾಮಿಯ ದರ್ಶನ ಪಡೆದರು. ವಿಶೇಷವಾಗಿ ನಾಗರ ಕಲ್ಲುಗಳಿಗೆ ಹಾಲೇರೆಯುವ ಮೂಲಕ ಭಕ್ತರು ತಮ್ಮ ಇಷ್ಟಾರ್ಥಗಳ ಈಡೆರಿಕೆಗಾಗಿ ದೇವರನ್ನು ಬೇಡಿಕೊಂಡರು.