ಕೊರೊನಾ ವೈರಸ್ ಹಾಗು ಚರ್ಮ ಗಂಟು ರೋಗದಿಂದ ಮೂರು ವರ್ಷಗಳ ಕಾಲ ಇತಿಹಾಸ ಪ್ರಸಿದ್ಧ ಘಾಟಿ ದನಗಳ ಜಾತ್ರೆ ನಡೆದಿರಲಿಲ್ಲ. ಈ ಬಾರಿ ಅದ್ಧೂರಿಯಾಗಿ ಜಾತ್ರೆ ನಡೆಯುತ್ತಿದ್ದು, ಬಹಳಷ್ಟು ಸಂಖ್ಯೆಯಲ್ಲಿ ರಾಸುಗಳ ಮಾರಾಟ ಮಾಡಲು ಬಂದಿದ್ದಾರೆ. ಬಿಜೆಪಿ ಯುವ ಮೋರ್ಚಾದಿಂದ ಮೂರು ದಿವಸಗಳ ಕಾಲ ಜಾನುವಾರುಗಳಿಗೆ ಉಚಿತವಾಗಿ ಮೇವು ಮತ್ತು ರೈತರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ, ರೈತರು ಇದನ್ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಕೀಲರು, ಬಿಜೆಪಿ ಮುಖಂಡ ಪ್ರತಾಪ್ ತಿಳಿಸಿದರು.
ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಕ್ಷೇತ್ರದಲ್ಲಿ ಭಾರೀ ದನಗಳ ಜಾತ್ರೆ ಪ್ರಯುಕ್ತ ರೈತರಿಗೆ ಊಟದ ವ್ಯವಸ್ಥೆ, ಹಾಗೂ ರಾಸುಗಳಿಗೆ ಉಚಿತವಾಗಿ ಮೇವನ್ನು ವಿತರಿಸಿ ಮಾತನಾಡಿದ ಅವರು, ದೂರದ ಊರುಗಳಿಂದ ರೈತರು ಜಾತ್ರೆಗೆ ಬಂದಿರುತ್ತಾರೆ. ಅವರ ಹಸಿವನ್ನ ನೀಗಿಸುವುದು ನಮ್ಮ ಕರ್ತವ್ಯ. ಆದ್ದರಿಂದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆಮ ಅದೇರೀತಿ ರಾಸುಗಳಿಗೆ ಮೇವನ್ನ ಸಹ ನೀಡಲಾಗಿದೆ ಎಂದರು.
ಇದೆ ಸಂಧರ್ಭದಲ್ಲಿ ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ, ಘಾಟಿ ಪಂಚಾಯ್ತಿ ಸದಸ್ಯ ವಾಸುದೇವ್, ತೂಬಗೆರೆ ಗ್ರಾಮ ಪಂ. ಸದಸ್ಯ ಕೃಷ್ಣಪ್ಪ, ಬಿಜೆಪಿ ಮುಖಂಡ ಗಂಗರಾಜು, ಲಗುಮಯ್ಯ, ಸುರೇಶ್, ಶರತ್, ಹರ್ಷ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.