
ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಮಹಿಳೆಯ ಮಾಂಗಲ್ಯ ಸರ ಕಳವು ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಿನ್ನೆ ನಡೆದ ಘಾಟಿ ಸುಬ್ರಮಣ್ಯ ಸ್ವಾಮಿ ಜಾತ್ರೆಯಲ್ಲಿ ಜಾತ್ರೆಗೆ ಆಗಮಿಸಿದ್ದ ಅಕ್ಕಯಮ್ಮ ಎಂಬ ಮಹಿಳೆ ಮಾಂಗಲ್ಯ ಸರ ಕದ್ದಿದ್ದಾರೆ.
ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರದ ನಿವಾಸಿ ಅಕ್ಕಯಮ್ಮ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ. ಮಾಂಗಲ್ಯ ಸೇರಿ 40 ಗ್ರಾಂ ತೂಕದ ಸರ ಕದ್ದಿರುವುದಾಗಿ ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ನಿನ್ನೆ ಘಾಟಿ ಜಾತ್ರೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಬಸ್ ಹತ್ತಿ ಮನೆಗೆ ವಾಪಸ್ ಬರುವಾಗ ಸರ ಕಳವಾಗಿದೆ ಎಂದು ಅಕ್ಕಯಮ್ಮ ಹೇಳಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.