ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸಮೀಪವಿರುವ ರಾಷ್ಟ್ರೋತ್ಥಾನ ಗೋಶಾಲೆ ಬಳಿ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಗೋಶಾಲೆಯ ಬಳಿ ಹಾದು ಹೋಗಿರುವ ರೈಲ್ವೆ ಸೇತುವೆ ಹತ್ತಿರ ಕರು ಮೇಯುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿದೆ ಎಂದು ಪಶುಪಾಲಕರು ತಿಳಿಸಿದ್ದಾರೆ. ಕರುವಿನ ಕುತ್ತಿಗೆ ಬಾಯಿ ಹಾಕಿ ಅರೆಬರೆ ತಿಂದು ಗೋಶಾಲೆಯ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಚಿರತೆ ಪರಾರಿಯಾಗಿದೆ.
ಗೋಶಾಲೆಯು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಚಿರತೆಗಳು ಆಗಾಗ ಕಾಣಿಸಿಕೊಳ್ಳುತ್ತಿರುತ್ತವೆ, ಈ ಹಿಂದೆಯೂ ಗೋಶಾಲೆಯ ಹಸುಗಳ ಮೇಲೆ ಚಿರತೆ ದಾಳಿ ಮಾಡಿದೆ ಎನ್ನಲಾಗಿದೆ.