ಘಾಟಿಯ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ಬಳಿ ಏಕಾಂತಕ್ಕೆ ಬಂದಿದ್ದ ಭಾವಿ ದಂಪತಿ: ಏಕಾಂತದಲ್ಲಿದ್ದವರ ಬಳಿ ಸುಲಿಗೆ ಮಾಡಿದ ಪೋಕರಿಗಳು: ಸುಲಿಗೆ ಮಾಡಿದ್ದ ಮೂವರು ಆರೋಪಿಗಳ ಬಂಧನ: ಬಂಧಿತರಿಂದ ಚಿನ್ನದ ಸರ, ಬೈಕ್, ಗೂಗಲ್ ಪೇ ಹಣ ಸೀಜ್….!: ಪಿಕಪ್ ಡ್ಯಾಂ ಬಳಿ ಪೊಲೀಸ್ ನಿಯೋಜನೆ ಮಾಡುವಂತೆ ಪ್ರವಾಸಿಗರ ಒತ್ತಾಯ….

ಬೆಂಗಳೂರು ನಗರಕ್ಕೆ ತೀರ ಸಮೀಪವಿರುವ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಭ್ರಹ್ಮಣ್ಯ ಕ್ಷೇತ್ರ. ಇದೇ ಕ್ಷೇತ್ರಕ್ಕೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು, ಪ್ರವಾಸಿಗರು ಬಂದು ದರ್ಶನ ಮಾಡಿ, ಇದೇ ಕ್ಷೇತ್ರದ ಬಳಿ ಸುಂದರ ಪಿಕಪ್ ಡ್ಯಾಂ….. ತುಂಬಿ ಜರಿ ಜರಿಯಾಗಿ ಜಲಪಾತದ ರೀತಿಯಲ್ಲಿ ಬಿಳ್ತಿರೋ ಡ್ಯಾಂ ಬಳಿ ಪ್ರವಾಸಿಗರ ದಂಡೇ ಬರುತ್ತದೆ….. ಇಲ್ಲಿ ಕೆಲಕಾಲ ಪ್ರಕೃತಿಯನ್ನು ಸವಿದು ಪ್ರವಾಸಿಗರು ಎಂಜಾಯ್ ಮಾಡುತ್ತಾರೆ. ಕೆಲವರು ಏಕಾಂತದಲ್ಲಿರಲು ಇಲ್ಲಿಗೆ ಭೇಟಿ ನೀಡುತ್ತಾರೆ.

ಇತ್ತೀಚೆಗೆ ಇಲ್ಲಿ ಸುಲಿಗೆ ಮಾಡುವ ಪೋಕರಿಗಳ ಗ್ಯಾಂಗ್ ಹುಟ್ಟಿಕೊಂಡಿದೆ.‌ ಹೀಗೆ ಡ್ಯಾಂಗೆ ಬರೋ ಪ್ರೇಮಿಗಳು ಹಾಗೂ ನವ ದಂಪತಿಗಳ ಬಳಿ ಸುಲಿಗೆ ಮಾಡವ ಯತ್ನಗಳು ನಡೆಯುತ್ತಿವೆ.

ಡ್ಯಾಂ ನೋಡುವ ಸಲುವಾಗಿ ಕಳೆದ ವಾರದ ಹಿಂದೆ ಭಾವಿ ದಂಪತಿ ಬಂದಿದ್ದರು. ಅವರು ಏಕಾಂತದಲ್ಲಿದ್ದಿದ್ದನ್ನು ಗಮನಿಸಿದ ಸುಲಿಗೆಕೋರರು, ಅವರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡಿ ಎಸ್ಕೆಪ್ ಆಗಿದ್ದಾರೆ. ಇದೀಗ ದೊಡ್ಡಬಳ್ಳಾಫುರ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ. ಇಂತಹ ಘಟನೆಗಳಿಂದ ಇಲ್ಲಿಗೆ ಬರೋ ಪ್ರವಾಸಿಗರು ಆತಂಕದಲ್ಲಿದ್ದಾರೆ.

ಅಂದಹಾಗೆ ಡ್ಯಾಂ ನೋಡಲು ಈ ಹಿಂದೆ ಬಂದಿದ್ದ ಪ್ರೇಮಿಗಳು ಮರ ಗಿಡಗಳ ಕೆಳಗೆ ಇದ್ದಾಗ ಬೆದರಿಸಿ ಹಣ ಸೇರಿದಂತೆ ಚಿನ್ನಾಭರಣವನ್ನ ಖದೀಮರು ದೋಚಿ ಎಸ್ಕೆಪ್ ಆಗಿದ್ದರು. ಜೊತೆಗೆ  ಕಳೆದ ವಾರ ನವದಂಪತಿ ಬಂದಾಗ ಹೊಂಚು ಹಾಕಿದ್ದ ಖದೀಮರು ಜೋಡಿಯ ಬಳಿ ದರೋಡೆ ಮಾಡಿ ಓಡಿ ಹೋಗಿದ್ದರು. ಇದೀಗ ಪೊಲೀಸರು ಡ್ಯಾಂ ಬಳಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಅಕ್ರಂ ಪಾಷ, ನಜೀರ್ ಮತ್ತು ಜಮೀರ್ ಎಂಬ ಮೂವರು ಆರೋಪಿಗಳನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಮೂವರು ಆರೋಪಿಗಳಿಂದ ಚಿನ್ನದ ಸರ, ಒಂದು ಬೈಕ್, ಉಂಗುರ ಮತ್ತು ಗೋಗಲ್ ಪೇ ಮಾಡಿಸಿಕೊಂಡಿದ್ದ 60 ಸಾವಿರ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಘಟನೆಯಿಂದಾಗಿ ಡ್ಯಾಂ ಬಳಿ ಒಂಟಿ ಒಂಟಿಯಾಗಿ ಪ್ರವಾಸಿಗರು ಬರಲು ಎದುರುತ್ತಿದ್ದಾರೆ. ಮಳೆಯಿಂದಾಗಿ ಸುಂದರ ಜರಿ ಜರಿ ಜಲಪಾತ ನೋಡಲು ಬರೋ ಪ್ರವಾಸಿಗರು ಖದೀಮರ ಆತಂಕದಲ್ಲಿದ್ದು, ಡ್ಯಾಂ ಬಳಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡುವಂತೆ ಮನವಿ ಮಾಡಿದ್ದಾರೆ.

ಒಟ್ಟಾರೆ, ಘಾಟಿ ಸುಬ್ರಹ್ಮಣ್ಯದ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ಬಳಿ ಪ್ರೇಮಿಗಳು , ನವದಂಪತಿಗಳನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದವರು ಇದೀಗ ಜೈಲು ಕಂಬಿ ಎಣೆಸುತ್ತಿದ್ದಾರೆ. ಮಳೆಯಿಂದಾಗಿ ಡ್ಯಾಂ ತುಂಬಿ ಸುಂದರ ಜಲಪಾತ ಸೃಷ್ಟಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರವಾಸಿಗರನ್ನ ಆಕರ್ಷಿಸಲಿದೆ. ಈ ನಿಟ್ಟಿನಲ್ಲಿ ಡ್ಯಾಂ ಬಳಿ ಪೊಲೀಸರನ್ನ ನಿಯೋಜನೆ ಮಾಡಿದರೆ ಒಳ್ಳೆಯದು ಅನ್ನೋದು ಇಲ್ಲಿಗೆ ಬರೋ ಪ್ರವಾಸಿಗರ ಮಾತಾಗಿದೆ.

Leave a Reply

Your email address will not be published. Required fields are marked *