Oplus_0
ಗ್ರಾಮ ಪಂಚಾಯ್ತಿ ಪಿಡಿಒಯೊಬ್ಬರು ಗ್ರಾ.ಪಂ ಅಧ್ಯಕ್ಷೆಗೆ ವಾಟ್ಸಾಪ್ ಚಾಟಿಂಗ್ ಮೂಲಕ ಎಂದು ಐಲವ್ ಯೂ ಎಂದು ಮೆಸೇಜ್ ಕಳುಸಿ ಜಾತಿ ನಿಂದನೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲ್ಲೂಕಿ ರಾಶ್ಚರುವು ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.
ಎರಡನೇ ಅವಧಿಗೆ ರಾಶ್ಚರುವು ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಗೆ ಕಳೆದ ಐದು ತಿಂಗಳ ಹಿಂದೆ ಪಂಚಾಯ್ತಿಗೆ ಬಂದ ಪಿಡಿಒ ಅಶೋಕ್ ಎಂಬಾತ ಅಧ್ಯಕ್ಷೆಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿರುವ ಆರೋಪ ಕೇಳಿಬಂದಿದೆ.
ಗ್ರಾಮ ಪಂಚಾಯ್ತಿಯಲ್ಲಿ ಯಾರು ಇಲ್ಲದ ವೇಳೆ ಅಸಭ್ಯವಾಗಿ ನೋಡುವುದು, ವಾಟ್ಸಾಪ್ ನಲ್ಲಿ ಐಲವ್‌ಯೂ ಎಂದು ಮೆಸೇಜ್ ಮಾಡಿ ಪ್ರಪೋಸ್ ಮಾಡಿರುವ ಆರೋಪ ಕೇಳಿಬಂದಿದೆ.
ಅನ್ಯ ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆಗೆ ಸಹಕರಿಸು ಎಂದು ಒತ್ತಾಯಿಸಿರುವುದು, ಜಾತಿನಿಂದನೇ ಮಾಡಿ ದೌರ್ಜನ್ಯ ಎಸಗಿದ್ದಾನೆ ಎಂದು ದೂರಲಾಗಿದೆ.
ಮಹಿಳಾ ಸದಸ್ಯರುಗಳ ಗಂಡಂದಿರು ಏನು ಹೇಳಿದ್ರೂ ಮಾಡಬೇಕು, ಅಕ್ರಮ ಕಾಮಗಾರಿಗಳ ಖಾಲಿ ಚೆಕ್ ಗಳಿಗೆ ಸಹಿ ಮಾಡಬೇಕು. ಖಾಲಿ ಚೆಕ್ ಮೂಲಕ ಇಪ್ಪತ್ತು ಸಾವಿರ ರೂಪಾಯಿ ಕೊಡುವಂತೆ ಪಿಡಿಒ ಅಶೋಕ್ ಅದ್ಯಕ್ಷರಿಗೆ ಧಮ್ಕಿ ಹಾಕಿದ್ದಾನೆಂದು ದೂರು ಕೇಳಿಬಂದಿದೆ.
ಇನ್ನೂ ಈ ಬಗ್ಗೆ ತಾಲೂಕು ಪಂ ಇಒ , ಜಿಲ್ಲಾ ಪಂ ಸಿಇಒಗೆ ದೂರು ಕೊಟ್ಟರು ಕ್ರಮ ಕೈಗೊಳ್ಳದ ಕಾರಣ ಪಿಡಿಒ ಆಶೋಕ್ ವಿರುದ್ದ ಗ್ರಾ,ಪಂ ಅಧ್ಯಕ್ಷೆ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ನಾವು ಅಕ್ರಮ ವಲಸಿಗರಲ್ಲ, ವಂಚಕರಲ್ಲ, ಈ ಮಣ್ಣಿನ ಮೂಲ ನಿವಾಸಿಗಳು. ದಯವಿಟ್ಟು ನಮ್ಮ ಅಸ್ತಿತ್ವವನ್ನು, ಸ್ವಾಭಿಮಾನವನ್ನು ಪ್ರಶ್ನಿಸಬೇಡಿ. ನಾವು ಭಾರತೀಯರು......…
ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…
ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…
ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…
ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…
ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…