ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರು, ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಕೆಲಸವೇನು..? ಅವರ ಜವಾಬ್ದಾರಿ ಏನು..? ಎಷ್ಟು ಪೆನ್ಷನ್ ನೋಂದಣಿ ಮಾಡಿಸುತ್ತಿದ್ದಾರೆ..? ಎಷ್ಟು ಹೌಸ್ ಸರ್ವೇ ಮಾಡುತ್ತಿದ್ದಾರೆ..? ಎಷ್ಟು ಜಮೀನುಗಳ ಬೆಳೆ ಸಮೀಕ್ಷೆ ಮಾಡುತ್ತಿದ್ದಾರೆ..? ಇವರ ನಿಜವಾದ ಕೆಲಸ ಕಾರ್ಯವೇನು..? ನಿಜವಾಗಿ ಇವರು ಅವರ ಅವರ ವ್ಯಾಪ್ತಿಯಲ್ಲಿ ಕೂತು ಕೆಲಸ ಮಾಡುತ್ತಿದ್ದಾರಾ…? ಗ್ರಾಮ ಲೆಕ್ಕಾಧಿಕಾರಿಗಳು ಕನಿಷ್ಠ ಇಬ್ಬರನ್ನು ಆಪ್ತ ಸಹಾಯಕರನ್ನ ಇಟ್ಟಿಕೊಂಡಿರುತ್ತಾರೆ. ರೆವೆನ್ಯೂ ಇನ್ಸ್ ಪೆಕ್ಟರ್ ನಾಡಕಚೇರಿಯಲ್ಲಿ ಕುಳಿತುಕೊಳ್ಳುವುದು ಬಿಟ್ಟು ನಗರದಲ್ಲಿ ಬಂದು ಕಮರ್ಷಿಯಲ್ ಕಟ್ಟಡದಲ್ಲಿ ಆಫೀಸ್ ಮಾಡಿಕೊಂಡಿರುತ್ತಾರೆ… ಇದರ ಬಗ್ಗೆ ಸಾರ್ವಜನಿಕವಾಗಿ ಹಾಗೂ ಸದನದಲ್ಲೂ ಮಾತನಾಡುತ್ತೇನೆ ಎಂದು ಶಾಸಕ ಧೀರಜ್ ಮುನಿರಾಜ್ ಅವರು ಗ್ರಾಮ ಸಹಾಯಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧ ಕಿಡಿಕಾರಿದರು.
ತಾಲೂಕು ಪಂಚಾಯಿತಿ ಕಚೇರಿಯಲ್ಲಿಂದು ಶಾಸಕ ಧೀರಜ್ ಮುನಿರಾಜ್ ನೇತೃತ್ವದಲ್ಲಿ ಕೆಡಿಪಿ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತವರಿಂದ ಜನಕ್ಕೆ ಯಾವ ಕೆಲಸ ಆಗುತ್ತದೆ. ಗ್ರಾಮಗಳು ಎಷ್ಟರ ಮಟ್ಟಿಗೆ ಉದ್ಧಾರ ಆಗುತ್ತವೆ. ಜನರ ಕಷ್ಟಗಳನ್ನು ಕೇಳುವವರು ಯಾರು..? ಎಂದು ಪ್ರಶ್ನೆ ಮಾಡಿದರು.
1999-2004 ಸಾಲಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಅತಿಹೆಚ್ಚು ಮಂಜೂರಾತಿ ಆಗಿತ್ತು. ಇಂದಿಗೂ ಸಹ ಶೇ.50ರಷ್ಟು ಮಂದಿಗೆ ಸಾಗುವಳಿ ಚೀಟಿ ನೀಡಿಲ್ಲ. ಸುಮಾರು 20ವರ್ಷವಾದರೂ ಶೇ.50ರಷ್ಟು ರೈತರು ಸಾಗುವಳಿ ಚೀಟಿ ತೆಗೆದುಕೊಳ್ಳಲು ಆಗಲಿಲ್ಲ. ಇದರ ಅರ್ಥ ಏನು..? ತಾಲೂಕಿನ 50, 53 ಅರ್ಜಿಗಳ ಮಾಹಿತಿಯನ್ನು ಇಲ್ಲಿ ಕೊಡಲ್ಲ ಎಂದು ಗೊತ್ತಾಗಿ ಸದನದಲ್ಲಿ ಕೇಳಿದ್ದೇನೆ. 53 ಅರ್ಜಿಗಳನ್ನು, ಕೆಲ ಬುಕ್ಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ಕೆಲ ಅಧಿಕಾರಿಗಳಿಂದ ಭ್ರಷ್ಟಾಚಾರ ಇನ್ನೂ ಹೆಚ್ಚಾಗುತ್ತಿದೆ. ಕೆಲ ಮೂಲ ಕಡತ, ದಾಖಲೆಗಳನ್ನು ಕಣ್ಮರೆ ಮಾಡಿಬಿಟ್ಟಿದ್ದಾರೆ. ಮೊದಲು ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೈಗೆ ಸಿಗಬೇಕು, ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ತಾಲೂಕು ಕಚೇರಿಯಲ್ಲಿ ಬ್ರೋಕರ್ ಕೆಲಸ ಮಾಡಿಕೊಂಡಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಬೇಕು ಎಂದು ನನ್ನ ಅಪೇಕ್ಷೆ. ಅಧಿಕಾರಿಗಳ ಬಳಿ ಯಾವುದಾದರೂ ಸರ್ಕಾರಿ ಕೆಲಸ ಮಾಡಿಸಿಕೊಳ್ಳಬೇಕೆಂದರೆ ನಮಗೇ ಜಿಗುಪ್ಸೆ ಬಂದು ನಾವೇ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇವೆ ಆ ಮಟ್ಟಕ್ಕೆ ಇವರು ನಮಗೆ ಕಾಟ ಕೊಡುತ್ತಾರೆ ಎಂದು ಆರೋಪಿಸಿದರು. ಹಣ ಕೇಳುವ ಅಧಿಕಾರಿಗಳ ಬಗ್ಗೆ ಸಾಕ್ಷಿ, ದಾಖಲೆ ಸಮೇತ ನಮ್ಮ ಗಮನಕ್ಕೆ ತಂದರೆ ನಾವು ಅದಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜೆಸಿಬಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಹಲವರಿಗೆ ಗಾಯಗಳಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಗೇಟ್ ಬಳಿ…
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ಸಂಚಾರ ಸುರಕ್ಷತಾ ಸಪ್ತಾಹ-2025ರ ಅಡಿಯಲ್ಲಿ ವಾಹನ (ಬೈಕ್) ಸವಾರರಿಗೆ ಹೆಲ್ಮೆಟ್…
ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಆಟೋ ಹಳ್ಳಕ್ಕೆ ಉರುಳಿಬಿದ್ದಿರುವ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಾವರ ಗೇಟ್ ಸಮೀಪ…
ಸೃಷ್ಟಿಯ ಸಹಜತೆ ಮತ್ತು ವಿಸ್ಮಯ....., ಅಲೆಗ್ಸಾಂಡರ್ ದಿ ಗ್ರೇಟ್ ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ.... ಶಾಂತಿ ದೂತ,…
ಎತ್ತಿನಹೊಳೆ ಯೋಜನೆ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದ್ದು ಒಂದು ವರ್ಷದಲ್ಲಿ ಜಿಲ್ಲೆಗೆ ನೀರು ಹರಿಯುವ ವಿಶ್ವಾಸವಿದೆ ಎಂದು ಆಹಾರ ನಾಗರಿಕ ಸರಬರಾಜು…
ಡಿ.15 ರಂದು ಕಾಣೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ…