ತಾಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಬಗೆರೆ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದಲಿತ ಕುಟುಂಬಗಳ ಗುಡಿಸಲುಗಳನ್ನು ಇಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ನೇತೃತ್ವದಲ್ಲಿ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.
ಒತ್ತುವರಿ ತೆರವು ಮಾಡಲು ಬಂದ ಅಧಿಕಾರಿಗಳು ಹಾಗೂ ಪೊಲೀಸರಿಗೆ ದಲಿತ ಕುಟುಂಬಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು.
ನಾವು ಈ ಸ್ಥಳದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಜೀವನ ಮಾಡುತ್ತಿದ್ದೇವೆ. ನಮಗೆ ಯಾವುದೇ ರೀತಿಯ ಸೌಲಭ್ಯಗಳಿಲ್ಲ ದಲಿತರು ಎಂದು ಇತರೆ ಸವರ್ಣೀಯರು ಯಾರು ಸಹ ಬಾಡಿಗೆ ಮನೆ ನೀಡುವುದಿಲ್ಲ. ಆದಕಾರಣ ನಾವು ಈ ಸ್ಥಳದಲ್ಲಿ ಗುಡಿಸಿಲುಗಳನ್ನು ಹಾಕಿಕೊಂಡು ಜೀವನ ಮಾಡುತ್ತಿದ್ದೇವೆ ನಮ್ಮಂತ ಬಡವರಿಗೆ ಪಂಚಾಯಿತಿ ಒಕ್ಕಲೆಬ್ಬಿಸಿ ನಮ್ಮ ಜಾಗಗಳನ್ನು ಗುಡಿಸಲು ಕಳೆದುಕೊಂಡವರು ಆರೋಪಿಸಿದರು.