ಗ್ರಾಮೀಣ ಜನರು ಮೂಲಭೂತ ಸೌಕರ್ಯಗಳು ಇಲ್ಲದೇ ತೀವ್ರತರನಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಂಧ್ರಪ್ರದೇಶದ ದೂರದ ಪ್ರದೇಶದ ಆಸ್ಪತ್ರೆಗೆ ಗರ್ಭಿಣಿ ಮಹಿಳೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿತುವ ದೃಶ್ಯ ಎಲ್ಲರ ಮನಕಲುಕುವಂತಿದೆ.
ಸರಿಯಾದ ರಸ್ತೆ ಸಂಪರ್ಕವಿಲ್ಲದ ಹಳ್ಳಿಯೊಂದರಲ್ಲಿ ಈ ಘಟನೆ ಸಂಭವಿಸಿದೆ. ಕುಟುಂಬ ಸದಸ್ಯರು ಮಹಿಳೆಯನ್ನು ಹರಿಯುತ್ತಿರುವ ನೀರಿನಲ್ಲಿ ತಮ್ಮ ಜೀವನ್ನು ಲೆಕ್ಕಿಸದೇ ಹಲವಾರು ಕಿಲೋಮೀಟರ್‌ಗಳವರೆಗೆ ಹೆಗಲ ಮೇಲೆ ಕೂರಿಸಿಕೊಂಡು ಸಾಗಿಸಿದ್ದಾರೆ.
ರಸ್ತೆಗಳಿಲ್ಲದ ಕಾರಣ ಮಹಿಳೆಯನ್ನು ಈ ಅನಿಶ್ಚಿತ ರೀತಿಯಲ್ಲಿ ಸಾಗಿಸುವುದನ್ನು ಬಿಟ್ಟು ಕುಟುಂಬಕ್ಕೆ ಬೇರೆ ದಾರಿಯಿಲ್ಲ.
ಸ್ಥಳೀಯ ನಿವಾಸಿಗಳು ಮೂಲಭೂತ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ. ಸುಧಾರಿತ ರಸ್ತೆ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊನೆಗೆ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಕರೆತರಲಾಯಿತು, ಅಲ್ಲಿ ಆಕೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.