ಗ್ರಾಮಸ ಸಮಸ್ಯೆಯನ್ನ ಬಗೆಹರಿಸುವಂತೆ ಹೇಳಿದ ಗ್ರಾಮದ ವ್ಯಕ್ತಿಯ ಬೆನ್ನು ಕ*ಚ್ಚಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಮದಲ್ಲಿ ನಡೆದಿದೆ. ಶಿಂಧೋಗಿ ಗ್ರಾಮ ಪಂಚಾಯತ್ ಅಧ್ಯಕ್ಷ ದುರ್ಗಪ್ಪ ಟೋಪೋಜಿ, ಆತನ ಸಂಬಂಧಿಗಳಿಂದ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಮನಬಂದಂತೆ ಚಪ್ಪಲಿಯಿಂದ ಹೊಡೆದು ಹ*ಲ್ಲೆಗೈಯಲಾಗಿದೆ ಎಂದು ಗ್ರಾಮದ ನಿವಾಸಿ ಹನುಮಂತ ಕರಿಕಟ್ಟಿ(30) ಆರೋಪಿಸಿದ್ದಾರೆ.
ಶಾಲೆ ಪಕ್ಕದಲ್ಲಿರೋ ರಸ್ತೆ ಮೇಲೆ ನಿಲ್ಲುವ ಚರಂಡಿ ನೀರಿನ ಸಮಸ್ಯೆ ಬಗ್ಗೆ ಪಿಡಿಓ ಗಮನಕ್ಕೆ ತಂದಿದ್ದ ಹನುಮಂತ. ರಸ್ತೆ ಮೇಲೆ ನಿಂತ ಚರಂಡಿ ನೀರಿನಲ್ಲೇ ಮಕ್ಕಳು ಶಾಲೆ, ಅಂಗನವಾಡಿಗೆ ನಡೆದುಕೊಂಡು ಹೋಗ್ತಾರೆ. ಇದನ್ನ ದುರಸ್ತಿ ಮಾಡುವಂತೆ ಪಿಡಿಓಗೆ ಮನವಿ ಮಾಡಿದ್ದರು.
ಇದೇ ವೇಳೆ ಅಧ್ಯಕ್ಷ ದೂರುದಾರ ಮೇಲೆ ಚಪ್ಪಲಿಯಿಂದ ಹ*ಲ್ಲೆಗೈದು ಬೆನ್ನು ಕ*ಚ್ಚಿ ವಿಕೃತಿ ಮೆರೆದಿದ್ದಾರೆ. ಪಿಡಿಓ ಮುಂದೆಯೇ ಅಧ್ಯಕ್ಷ ಸೇರಿ ಆತನ ಸಂಬಂಧಿಗಳು ಹ*ಲ್ಲೆ ಮಾಡಿದ್ದಾರೆ. ಬಳಿಕ ಮನೆಗೆ ನುಗ್ಗಿ ತಾಯಿ, ನಮ್ಮ ಅಜ್ಜಿಯ ಮೇಲೆ ಬಡಿಗೆ, ಸಲಕಿಯಿಂದ ಹೊ*ಡೆದಿದ್ದಾರೆ.
ನಮ್ಮ ತಾಯಿಯ ತಾಳಿಯನ್ನೂ ಕಿತ್ತುಹಾಕಿದ್ದಾರೆ ಎಂದು ಹನುಮಂತ ಆರೋಪಿಸಿದ್ದಾರೆ. ಈ ಹಿಂದೆ ಗ್ರಾಮ ಪಂಚಾಯತ್ ನಲ್ಲಿ ನಡೆದ ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಿದ್ದೆ. ಅದೇ ದ್ವೇಷ ಇಟ್ಟುಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಹುನುಮಂತ ಹೇಳುತ್ತಿದ್ದಾರೆ.
ಸದ್ಯ ಗಾಯಗೊಂಡ ಹನುಮಂತ, ವೃದ್ಧೆಗೆ ಸವದತ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…
ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..…
ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…
ಸೆಲೂನ್ ನಲ್ಲಿ ಯುವಕನ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…
ಎ.ವಿ ಲಕ್ಷ್ಮಿನಾರಾಯಣ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರನ್ನಾಗಿ ನೇಮಕ ಮಾಡಲಾಗಿದೆ.. ಈ ಹಿಂದೆ ತುಮಕೂರು…
ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ದಾಳಿ ವೇಳೆ 14 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.…