ಗ್ರಾಮದ ಸಮಸ್ಯೆ ಹೇಳಿದವನ ಬೆನ್ನು ಕಚ್ಚಿದ ಗ್ರಾಮ ಪಂಚಾಯಿತಿ ಅಧ್ಯಕ್ಷ…!

ಗ್ರಾಮಸ ಸಮಸ್ಯೆಯನ್ನ ಬಗೆಹರಿಸುವಂತೆ ಹೇಳಿದ ಗ್ರಾಮದ ವ್ಯಕ್ತಿಯ ಬೆನ್ನು ಕ*ಚ್ಚಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಮದಲ್ಲಿ ನಡೆದಿದೆ. ಶಿಂಧೋಗಿ ಗ್ರಾಮ ಪಂಚಾಯತ್ ಅಧ್ಯಕ್ಷ ದುರ್ಗಪ್ಪ ಟೋಪೋಜಿ, ಆತನ ಸಂಬಂಧಿಗಳಿಂದ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ.

ಮನಬಂದಂತೆ ಚಪ್ಪಲಿಯಿಂದ ಹೊಡೆದು ಹ*ಲ್ಲೆಗೈಯಲಾಗಿದೆ ಎಂದು ಗ್ರಾಮದ ನಿವಾಸಿ ಹನುಮಂತ ಕರಿಕಟ್ಟಿ(30) ಆರೋಪಿಸಿದ್ದಾರೆ.

ಶಾಲೆ ಪಕ್ಕದಲ್ಲಿರೋ ರಸ್ತೆ ಮೇಲೆ ನಿಲ್ಲುವ ಚರಂಡಿ ನೀರಿನ ಸಮಸ್ಯೆ ಬಗ್ಗೆ ಪಿಡಿಓ ಗಮನಕ್ಕೆ ತಂದಿದ್ದ ಹನುಮಂತ. ರಸ್ತೆ ಮೇಲೆ ನಿಂತ ಚರಂಡಿ ನೀರಿನಲ್ಲೇ ಮಕ್ಕಳು ಶಾಲೆ, ಅಂಗನವಾಡಿಗೆ ನಡೆದುಕೊಂಡು ಹೋಗ್ತಾರೆ. ಇದನ್ನ ದುರಸ್ತಿ ಮಾಡುವಂತೆ ಪಿಡಿಓಗೆ ಮನವಿ ಮಾಡಿದ್ದರು‌.

ಇದೇ ವೇಳೆ ಅಧ್ಯಕ್ಷ ದೂರುದಾರ ಮೇಲೆ ಚಪ್ಪಲಿಯಿಂದ ಹ*ಲ್ಲೆಗೈದು ಬೆನ್ನು ಕ*ಚ್ಚಿ ವಿಕೃತಿ ಮೆರೆದಿದ್ದಾರೆ. ಪಿಡಿಓ ಮುಂದೆಯೇ ಅಧ್ಯಕ್ಷ ಸೇರಿ ಆತನ ಸಂಬಂಧಿಗಳು ಹ*ಲ್ಲೆ ಮಾಡಿದ್ದಾರೆ. ಬಳಿಕ ಮನೆಗೆ ನುಗ್ಗಿ ತಾಯಿ, ನಮ್ಮ ಅಜ್ಜಿಯ ಮೇಲೆ ಬಡಿಗೆ, ಸಲಕಿಯಿಂದ ಹೊ*ಡೆದಿದ್ದಾರೆ.

ನಮ್ಮ ತಾಯಿಯ ತಾಳಿಯನ್ನೂ ಕಿತ್ತುಹಾಕಿದ್ದಾರೆ ಎಂದು ಹನುಮಂತ ಆರೋಪಿಸಿದ್ದಾರೆ. ಈ ಹಿಂದೆ ಗ್ರಾಮ ಪಂಚಾಯತ್ ನಲ್ಲಿ ನಡೆದ ಅಕ್ರಮ‌ಗಳ ಬಗ್ಗೆ ಪ್ರಶ್ನೆ ಮಾಡಿದ್ದೆ. ಅದೇ ದ್ವೇಷ ಇಟ್ಟುಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಹುನುಮಂತ ಹೇಳುತ್ತಿದ್ದಾರೆ.

ಸದ್ಯ ಗಾಯಗೊಂಡ ಹನುಮಂತ, ವೃದ್ಧೆಗೆ ಸವದತ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!