ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು, ರಿಪೇರಿ ಮಾಡಲು ಟ್ರಾನ್ಸ್ ಫಾರ್ಮ್ ಏರಿದ್ದಾನೆ, ಈ ವೇಳೆ ವಿದ್ಯುತ್ ಪ್ರವಹಿಸಿ ರೈತ ಟ್ರಾನ್ಸ್ ಫಾರ್ಮ್ ನಲ್ಲಿಯೇ ಸಾವನ್ನಪ್ಪಿದ್ದಾನೆ
ದೊಡ್ಡಬಳ್ಳಾಪುರ ತಾಲೂಕು ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಗಳಾಪುರದಲ್ಲಿ ಕಳೆದ ರಾತ್ರಿ ಘಟನೆ ನಡೆದಿದ್ದು, ದುರ್ಘಟನೆಯಲ್ಲಿ ಗ್ರಾಮದ ರಂಗಪ್ಪ (42) ಸಾವನ್ನಪ್ಪಿದ್ದಾನೆ, ಮೃತ ವ್ಯಕ್ತಿಗೆ ಮದುವೆಯಾಗಿದ್ದು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ನಿನ್ನೆ ಸಂಜೆ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು, ರಾತ್ರಿ ವಿದ್ಯುತ್ ಸಂಪರ್ಕದ ಅವಶ್ಯಕತೆ ಇತ್ತು, ಹಾಲಿನ ಡೈರಿಗೆ ಹಾಲು ಹಾಕಿ ಬಂದ ಆತ, ಮಳೆಯಲ್ಲೇ ತನ್ನ ಜಮೀನಿನಲ್ಲಿದ್ದ ಟ್ರಾನ್ಸ್ ಫಾರ್ಮ್ ಗೆ ಕಬ್ಬಿಣದ ಏಣಿ ಹಾಕಿಕೊಂಡು ಹತ್ತಿ ವಿದ್ಯುತ್ ಸರಿಪಡಿಸುತ್ತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ತಲೆಗೆ ಶಾಕ್ ಹೊಡೆದಿದೆ… ತಲೆ ಹಾಗೂ ಮೈಭಾಗಗಳು ಸುಟ್ಟು ಹೋಗಿವೆ ಎಂದು ಮೂಲಗಳಿಂದ ತಿಳಿದುಬಂದಿದೆ…
ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.