ಗ್ರಂಥಾಲಯ ಉದ್ಘಾಟನೆಗೆ ಬೆಳಗ್ಗೆ ಆಹ್ವಾನ ಬಂದಿದ್ದು: ಗಣರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ತ ದೇಶಕ್ಕೆ ಗೌರವ ಸೂಚಿಸಲು ಈ ಮೊದಲೇ ನಿಗದಿಯಾಗಿದ್ದ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಹೋಗಿದ್ದೆ: ಇಷ್ಟಕ್ಕೆ ಕೆಲವರು ಪ್ರತಿಭಟನೆ ನಡೆಸಿದ್ದಾರೆ: ಶಾಸಕ ಧೀರಜ್ ಮುನಿರಾಜ್ ಹೇಳಿಕೆ

ದೊಡ್ಡಬಳ್ಳಾಪುರ ನಗರದ 12ನೇ ವಾರ್ಡ್ ನ ವೀರಭಧ್ರನಪಾಳ್ಯದಲ್ಲಿ ನೂತನವಾಗಿ ಗ್ರಂಥಾಲಯ ನಿರ್ಮಾಣವಾಗಿದ್ದು, ಇಂದು ಗ್ರಂಥಾಲಯ ಉದ್ಘಾಟನೆ ಇದೆ ತಾವು ಬರಬೇಕು ಎಂದು ಇಂದು ಬೆಳಗ್ಗೆ ತರಾತುರಿಯಲ್ಲಿ ಬಂದು ನನಗೆ ಆಹ್ವಾನ ನೀಡಲಾಗಿತ್ತು. ಇಂದು ಗಣರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ತ ದೇಶಕ್ಕೆ ಗೌರವ ಸೂಚಿಸಲು ಈ ಮೊದಲೇ ನಿಗದಿಯಾಗಿದ್ದ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಹೋಗಿದ್ದೆ. ಇಷ್ಟಕ್ಕೆ ಕೆಲವರು ಪ್ರತಿಭಟನೆ ನಡೆಸಿದ್ದಾರೆ ಎಂದು‌ ಶಾಸಕ ಧೀರಜ್ ಮುನಿರಾಜ್ ಹೇಳಿದ್ದಾರೆ.

ದಲಿತ ಕಾಲೋನಿಯಲ್ಲಿನ ಉದ್ಘಾಟನೆಗೆ ಬರುವುದಾಗಿ ಹೇಳಿದ ಶಾಸಕರು ಏಕಾಏಕಿ ಕಾರ್ಯಕ್ರಮ ರದ್ದು ಮಾಡಿದ್ದಾರೆ, ತಮ್ಮನ ಮದುವೆ ಪತ್ರಿಕೆ ಅಹ್ವಾನ ಪತ್ರಿಕೆ ಹಂಚುವ ಕಾರಣಕ್ಕೆ ಗ್ರಂಥಾಲಯ ಉದ್ಘಾಟನೆಗೆ ಶಾಸಕರು ಬರದೆ ಅಂಬೇಡ್ಕರ್ ರವರಿಗೆ ಅಗೌರವ ತೋರಿಸಿದ್ದಾರೆಂದ್ದು ಆರೋಪಿಸಿ ವೀರಭಧ್ರನಪಾಳ್ಯದ ನಿವಾಸಿಗಳು ಇಂದು ಪತ್ರಿಭಟನೆ ನಡೆಸಿದರು. ಈ ಕುರಿತು ಪಬ್ಲಿಕ್ ಮಿರ್ಚಿಯೊಂದಿಗೆ ಮಾತನಾಡಿದ ಶಾಸಕ ಧೀರಜ್ ಮುನಿರಾಜ್ ಅವರು ಗ್ರಂಥಾಲಯ ಉದ್ಘಾಟನೆ ಮಾಡಬೇಕೆಂದು ಇಂದು ಬೆಳಗ್ಗೆ ನನಗೆ ಆಹ್ವಾನ ನೀಡಿದ್ದಾರೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ‌ ಗ್ರಂಥಾಲಯ ಉದ್ಘಾಟನೆಗೆ ಹೋಗಲು ಆಗಿಲ್ಲ. ನಾನು ಯಾರ ವಿರೋಧಿಯೂ ಅಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿದೆ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಹೇಳಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಸದಾ ಗೌರವವನ್ನು ನೀಡುತ್ತೇನೆ. ಸಂವಿಧಾನ ಬಗ್ಗೆ ಅಪಾರವಾದ ಗೌರವವಿದೆ, ಓದುಗರ ಬಗ್ಗೆ ಕಾಳಜಿಯೂ ಇದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಸ್ಥಳೀಯ ಯುವಕ ವಿಜಯಕುಮಾರ್, ಶಾಸಕರು ಸಂವಿಧಾನ ವಿರೋಧಿಯಾಗಿದ್ದು, ದಲಿತರ ಕಾಲೊನಿಯಲ್ಲಿನ ಗ್ರಂಥಾಲಯ ಎಂಬ ಕಾರಣಕ್ಕೆ ಉದಾಸೀನತೆ ತೋರಿದ್ದಾರೆ, ಗ್ರಂಥಾಲಯ ಅಧಿಕಾರಿ ಸರೋಜಮ್ಮನವರಿಗೆ ಧಮ್ಕಿಯಾಕಿ ಗ್ರಂಥಾಲಯ ಕಟ್ಟಡಕ್ಕೆ ಬೀಗ ಹಾಕಿ ಕೊಂಡುಹೋಗುವಂತೆ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂದು ಗಣರಾಜ್ಯೋತ್ಸವ ಹಿನ್ನಲೆ ಒಳ್ಳೇಯ ದಿನವಾದ ಕಾರಣಕ್ಕೆ ಗ್ರಂಥಾಲಯ ಉದ್ಘಾಟನೆಗಾಗಿ ಪೆಂಡಾಲ್ ಸೇರಿದಂತೆ ಅಲಂಕಾರಕ್ಕಾಗಿ ಹಣ ಖರ್ಚು ಮಾಡಲಾಗಿತ್ತು, ಇವತ್ತು ಶಾಸಕರು ಸಹೋದರನ ಮದುವೆ ಅಹ್ವಾನ ಪತ್ರಿಕೆ ಹಂಚುವ ಕಾರಣಕ್ಕೆ ಕಾರ್ಯಕ್ರಮಕ್ಕೆ ಬರದೆ ಉದಾಸೀನತೆ ತೋರಿದ್ದಾರೆ, ಮಧ್ಯಾಹ್ನದೊಳಗೆ ಬರದೆ ಇದ್ದರೆ ನಾವೇ ಬಾಗಿಲ ಬೀಗ ಹೊಡೆದು ಗ್ರಂಥಾಲಯ ಉದ್ಘಾಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

ನಂತರ ವಾರ್ಡ್ ನ ಸದಸ್ಯ ಶಿವು ಅವರು ಪಬ್ಲಿಕ್‌ ಮಿರ್ಚಿಯೊಂದಿಗೆ ಮಾತನಾಡಿ, ಸರ್ಕಾರಿ ಕಾರ್ಯಕ್ರಮಗಳು ಏನೇ ಇದ್ದರೂ ಪ್ರೊಟೊಕಾಲ್ ಮೂಲಕವೇ ನಡೆಯಬೇಕು. ಸ್ಥಳೀಯ ಜನಪ್ರತಿನಿಧಿಗಳಿಗೆ ಒಂದೆರೆಡು ದಿನಗಳ ಮುಂಚೆಯೇ ಆಹ್ವಾನ ಪತ್ರಿಕೆ ಮೂಲಕ ಲಿಖಿತವಾಗಿ ತಿಳಿಸಬೇಕು. ಯಾವ ಪ್ರೊಟೊಕಾಲ್ ಪಾಲಿಸದೇ ಇಂದು ಬೆಳಗ್ಗೆ 10ಗಂಟೆ ಕಾರ್ಯಕ್ರಮಕ್ಕೆ ತರಾತುರಿಯಲ್ಲಿ ನಿನ್ನೆ ರಾತ್ರಿ ಸುಮಾರು 9ಗಂಟೆಗೆ ಫೋನ್ ಕಾಲ್ ಮೂಲಕ ಮಾಹಿತಿ ತಿಳಿಸಿದ್ದಾರೆ ಎಂದರು.

ಇಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವು, ಆದ್ದರಿಂದ ಗ್ರಂಥಾಲಯ ಉದ್ಘಾಟನಾ‌ ಕಾರ್ಯಕ್ರಮಕ್ಕೆ ಹೋಗಲು ಆಗಲಿಲ್ಲ. ಮುಂದಿನ ದಿನಗಳಲ್ಲಿ ಲಿಖಿತವಾಗಿ ಆಹ್ವಾನ ನೀಡಿದರೆ ಖಂಡಿತ ಹೋಗುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *