ಗ್ಯಾಸ್ ಬಳಕೆ ಮಾಡುವಾಗ ರಕ್ಷಣಾ ಕಾರ್ಯತಂತ್ರಗಳನ್ನು ಅನುಸರಿಸಿ-ಎಸ್ಎಲ್ ಎನ್ಎಸ್ ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕ ಶ್ರೇಯಸ್

ದೇವನಹಳ್ಳಿ: ಮಹಿಳೆಯರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕ ನೀಡುತ್ತಿರುವುದನ್ನು ಸದುಉಪಯೋಗಪಡಿಸಿಕೊಳ್ಳಿ ಹಾಗೂ ಗ್ಯಾಸ್ ಬಳಕೆ ಮಾಡುವಾಗ ರಕ್ಷಣಾ ಕಾರ್ಯತಂತ್ರಗಳನ್ನು ಅನುಸರಿಸುವುದು ಬಹುಮುಖ್ಯ ಎಂದು ಎಸ್ಎಲ್ ಎನ್ಎಸ್ ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕರಾದ ಶ್ರೇಯಸ್ ಮಾಹಿತಿ ನೀಡಿದರು.

ದೇವನಹಳ್ಳಿ ಪಟ್ಟಣದಲ್ಲಿರುವ ಎಸ್ಎಲ್ಎನ್ಎಸ್ ಭಾರತ್ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ (PMUY)ಉಚಿತ ಗ್ಯಾಸ್ ಮತ್ತು ಗ್ಯಾಸ್ ಸ್ಟೌವ್ ಸೌಲಭ್ಯ ಸಬ್ಸಿಡಿ ದರದಲ್ಲಿ ವಿತರಣೆ ಮಾಡಿ, ಮಾತನಾಡಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎ .ವಿ ನಾರಾಯಣಸ್ವಾಮಿ ಮಾತನಾಡಿ, ಪ್ರಧಾನಿ‌ ಮೋದಿಯವರು ಮಾತಿನಂತೆ ನಡೆದುಕೊಳ್ಳುವ ವ್ಯಕ್ತಿತ್ವ ಆದರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಕೇವಲ ನಾಮಾಕವಸ್ಥೆಗೆ ಕೆಲವರಿಗೆ ತಲುಪಿಸಿದ್ದು ಬಿಟ್ಟರೆ ಪೂರ್ಣ ಪ್ರಮಾಣದ ಯೋಜನೆಗಳನ್ನು ತಲುಪಿಸಿಲ್ಲ,ಕಟ್ಟಿಗೆ ಓಲೆಯಲ್ಲಿ ಅಡುಗೆ ಮಾಡುವಾಗ ಮಹಿಳೆಯರಿಗೆ ಟಿಬಿ, ಕ್ಷಯ ಮತ್ತು ಶ್ವಾಸಕೋಶದ ಅನಾರೋಗ್ಯ ತೊಂದರೆ ತಪ್ಪಿಸಿ ಮಹಿಳೆಯರ ಅರೋಗ್ಯ ರಕ್ಷಣೆಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.

ಬಿಜೆಪಿ ಮುಖಂಡ ಮತ್ತು ಕೊರಮ ಸಮುದಾಯದ ಅಧ್ಯಕ್ಷ ಎಕೆಪಿ ನಾಗೇಶ್ ಮಾತನಾಡಿ ಮೋದಿಯವರ ಯೋಜನೆಗಳು ಪ್ರತಿಯೊಬ್ಬ ಬಡವನಿಗೂ ತಲುಪುವ ಯೋಜನೆಗಳು ಅದು ಬಿಜೆಪಿಯ ಸಾಧನೆ, ದೇಶದ ಎಲ್ಲಾ ನಾಗರೀಕರಿಗೂ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ವಿದ್ಯಾಭ್ಯಾಸ ನೀಡುವ ಸದುದ್ದೇಶ ಹೊಂದಿದ್ದಾರೆ.
ಅವರ ಆಡಳಿತದಲ್ಲಿ ಪಾರದರ್ಶಕತೆ ಹೊಂದಿದೆ ಹಾಗಾಗಿ ಮುಂಬರುವ ಚುನಾವಣೆಯಲ್ಲೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ‌ ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ರವಿಕುಮಾರ್.ಎಚ್, ಜಿಲ್ಲಾಧ್ಯಕ್ಷ ಶಿವಪ್ರಸಾದ್ ಪ್ರಧಾನ ಕಾರ್ಯದರ್ಶಿ ನಿಲೇರಿ ಮಂಜುನಾಥ್, ಮುಖಂಡರಾದ ಎಸ್ಎಲ್ಎನ್ ಅಶ್ವಥ್ ನಾರಾಯಣ್ ತಾಲೂಕು ಅಧ್ಯಕ್ಷ ಸುನಿಲ್ ಸೇರಿದಂತೆ ಮುಖಂಡರು ಮತ್ತು ಫಲಾನುಭವಿಗಳು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *