ನಗರದ ಜಿ.ರಾಮೇಗೌಡ ವೃತ್ತದ ಸಮೀಪ ಇರುವ ಆಟೋ ಗ್ಯಾಸ್ ಬಂಕ್ ಬಳಿ ಗ್ಯಾಸ್ ಫಿಲ್ ಮಾಡಿಸುವ ವೇಳೆ ಆಟೋ ಇಂಜಿನ್ ಬಿಸಿಯಾಗಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ. ಬೆಂಕಿ ನಂದಿಸುವಷ್ಟರಲ್ಲಿ ಸಂಪೂರ್ಣ ಸುಟ್ಟುಕರಕಲಾದ ಆಟೋ. ಆಟೋ ಡ್ರೈವರ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ತಾಲೂಕಿನ ಹೊಸಹಳ್ಳಿ ಗ್ರಾಮದ ನಿವಾಸಿ ಶಿವಕುಮಾರ್ ಆಟೋ ಮಾಲೀಕ. ಬಿಎಂಟಿಸಿ ಬಸ್ ಚಾಲಕನಾಗಿದ್ದ ಶಿವಕುಮಾರ್. ಆರನೇ ವೇತನ ಆಯೋಗ ಜಾರಿಗಾಗಿ ಪ್ರತಿಭಟನೆ ನಡೆಸುವ ವೇಳೆ ಕೆಲಸದಿಂದ ವಜಾಗೊಳಿಸಿದ್ದರಿಂದ ಜೀವನ ಆಧಾರಕ್ಕಾಗಿ ಸೆಕೆಂಡ್ ಹ್ಯಾಂಡ್ ಆಗಿ ಒಂದು ವರ್ಷದಿಂದೆ ಗ್ಯಾಸ್ ಆಟೋ ಖರೀದಿ ಮಾಡಿ ಜೀವನ ನಡೆಸುತ್ತಿದೆ ಎಂದು ಆಟೋ ಮಾಲೀಕ ಶಿವಕುಮಾರ್ ಹೇಳಿದರು.
ಇಂದು ದೂರದ ಊರಿಗೆ ಬಾಡಿಗೆ ಹೋಗಿದ್ದೆ, ಗ್ಯಾಸ್ ಕಡಿಮೆ ಆಗಿದ್ದರಿಂದ ಗ್ಯಾಸ್ ಫಿಲ್ ಮಾಡಿಸಲೆಂದು ಬಂದಾಗ ಇಂಜಿನ್ ಬಿಸಿಯಾಗಿ ಕಿಡಿ ಹೊತ್ತಿ ಉರಿದಿದೆ.
ಗ್ಯಾಸ್ ತುಂಬಿಸಿ ರಸ್ತೆಗೆ ಬಂದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಆಟೋದಲ್ಲಿ ಪ್ರಯಾಣಿಕರು ಸಹ ಇದ್ದರು, ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಿ ಬೆಂಕಿನಂದಿಸುವ ಕಾರ್ಯ ಮಾಡಿದೆ. ಆದರೂ ಬೆಂಕಿ ಕೆನ್ನಾಲಿಗೆಗೆ ಆಟೋ ಸುಟ್ಟು ಭಸ್ಮವಾಗಿದೆ. ಜೀವನ ನಡೆಸಲು ಇದ್ದ ಆಟೋ ಕಳೆದುಕೊಂಡಿದ್ದೇನೆ ಈಗ ನನಗೆ ದಿಕ್ಕು ತೋಚದಂತೆ ಆಗಿದೆ ಎಂದು ಕಣ್ಣೀರಿಟ್ಟು ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ.