
ನೆಲಮಂಗಲದಲ್ಲೋಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಗಂಡ ಸಾವಿನ ಬೆನ್ನಲ್ಲೆ ಮನನೊಂದು ಹೆಂಡತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಡ ರಾಜು, ಪತ್ನಿ ಮೀನಾ ಮೃತಪಟ್ಟ ದಂಪತಿ.
ಮೂಲತಃ ಕುಣಿಗಲ್ ನಿವಾಸಿಗಳಾದ ದಂಪತಿ 20 ವರ್ಷದ ಹಿಂದೆ ಮದುವೆಯಾಗಿ ನೆಲಮಂಗಲದ ಜಕ್ಕಸಂದ್ರದಲ್ಲಿ ಮನೆ ಲೀಸ್ ಪಡೆದು ವಾಸವಾಗಿದ್ದರು.
ಗಂಡನ ಶವದ ಮುಖ ಕೂಡ ನೋಡದೆ ಮನನೊಂದು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ಸಂಜೆ ಸ್ನಾನ ಮಾಡಲು ಬಾತ್ ರೂಂ ಗೆ ತೆರಳಿದ್ದ ಪತಿ ರಾಜು, ಈ ವೇಳೆ ಗ್ಯಾಸ್ ಗೀಸರ್ ಎಡವಟ್ಟಿನಿಂದ ಸಾವನ್ನಪ್ಪಿದ್ದ.

ಒಂದು ಗಂಟೆಯಾದ್ರೂ ಬಾತ್ ರೂಂ ನಿಂದ ಹೊರ ಬಾರದ ಹಿನ್ನೆಲೆ, ಮಗ ಡೋರ್ ಒಡೆದು ನೋಡಿದಾಗ ಕುಸಿದು ಬಿದ್ದಿದ್ದ. ಮಗ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದು ವೈದ್ಯರು ದೃಢಪಡಿಸಿದ್ದಾರೆ.
ಈ ಹಿನ್ನೆಲೆ ತಂದೆ ಸಾವನ್ನಪ್ಪಿರುವುದನ್ನ ತನ್ನ ತಾಯಿ ಮೀನಾಗೆ ಮಗ ತಿಳಿಸಿದ್ದಾನೆ. ಆಗ ಮೃತನ ಹೆಂಡತಿ ಡೆತ್ ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನನ್ನ ಗಂಡನನ್ನ ಬಿಟ್ಟು ಒಂದು ನಿಮಿಷವೂ ನಾನು ಬದುಕಿರುವುದಿಲ್ಲ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.
ಡೆತ್ ನೋಟ್ನಲ್ಲಿ ಯಾರ್ಯಾರಿಗೆ ಏನೇನು ಕೊಡಬೇಕು ಅದೆಲ್ಲವನ್ನ ಕೊಟ್ಟುಬಿಡಿ, ನನ್ನ ಕ್ಷಮಿಸಿಬಿಡಿ ಎಂದು ಉಲ್ಲೇಖಿಸಿದ್ದಾರೆ.
ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.
ಗಂಡ ಹೆಂಡತಿ ಮೃತ ದೇಹ ನೆಲಮಂಗಲ ಸರ್ಕಾರಿ ಶವಗಾರದಲ್ಲಿ ದಲ್ಲಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಈ ವೇಳೆ ದಂಪತಿಗಳ ಮೃತ ದೇಹದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.