ಗೌರಿ ಗಣೇಶ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಮನೆಯಲ್ಲಿ ಗಣೇಶ ಕೂರಿಸಲು ಈಗಾಗಲೇ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಅದರಲ್ಲೂ ಪಿಓಪಿ ಗಣೇಶ ಹೊರತುಪಡಿಸಿ ಮಣ್ಣಿನ ಗಣೇಶ ಸೇರಿ ಪರಿಸರ ಸ್ನೇಹಿ ಗಣಪತಿ ಕಡೆಗೆ ಜನ ಮನಸ್ಸು ಮಾಡುತ್ತಿದ್ದಾರೆ.
ಈ ಹಿನ್ನೆಲೆ ಮಾರುಕಟ್ಟೆಗೆ ಸಗಣಿ ಗಣಪ ಎಂಟ್ರಿ ಕೊಟ್ಟಿದ್ದು, ಜನ ಈ ಗಣೇಶ ಕೊಳ್ಳಲು ಈಗಾಗಲೇ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಏನಿದು ಸಗಣಿ ಗಣಪ, ಇದು ಸಿಗುವುದು ಎಲ್ಲಿ ಅಂತಿರಾ ಈ ಸ್ಟೋರಿ ಓದಿ……………
ಹಸುವಿನ ಸಗಣಿಯಿಂದ ಮಾಡಿದ ಗಣೇಶನ ವಿಗ್ರಹವೇ ಗೋಮಯ ಗಣೇಶ. ಸಂಪೂರ್ಣವಾಗಿ ನೈಸರ್ಗಿಕ ವಸ್ತುಗಳಿಂದ ಮಾಡಲ್ಪಟ್ಟಿರುತ್ತದೆ ಮತ್ತು ಯಾವುದೇ ರಾಸಾಯನಿಕ ಬಣ್ಣಗಳನ್ನು ಅಥವಾ ವಸ್ತುಗಳನ್ನು ಬಳಸುವುದಿಲ್ಲ. ಇದು ಪರಿಸರ ಸ್ನೇಹಿ ಮತ್ತು ನೈಸರ್ಗಿಕ ವಸ್ತುವಿನಿಂದ ತಯಾರಿಸಲ್ಪಟ್ಟಿರುವುದರಿಂದ ಪೂಜೆಯ ನಂತರ ಸುಲಭವಾಗಿ ಮಣ್ಣಿನಲ್ಲಿ ಕರಗಿ ಹೋಗುತ್ತದೆ. ನಂತರ ಗೊಬ್ಬರವಾಗಿ ಬಳಸಬಹುದು. ಇದು ಪರಿಸರಕ್ಕೆ ಹಾನಿಕಾರಕವಲ್ಲ ಮತ್ತು ಪೂಜೆಗೆ ಸೂಕ್ತವಾದ ವಸ್ತುವಾಗಿದೆ.
ಕೆಲವರು ಗೋಮಯ ಗಣೇಶನ ವಿಗ್ರಹವು ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬುತ್ತಾರೆ.
ಹಸುವಿನ ಸಗಣಿಯಲ್ಲಿ ಲಕ್ಷ್ಮಿ ದೇವಿಯ ವಾಸವಿರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೀಗಾಗಿ, ಗೋಮಯ ಗಣೇಶನನ್ನು ಪೂಜಿಸುವುದರಿಂದ ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಇತ್ತೀಚಿನ ದಿನಗಳಲ್ಲಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡುತ್ತಿರುವ ಹಿನ್ನೆಲೆಯಲ್ಲಿ ಗೋಮಯ ಗಣೇಶನ ವಿಗ್ರಹಗಳು ಹೆಚ್ಚು ಜನಪ್ರಿಯವಾಗುತ್ತಿವೆ.
ಹೌದು, ಸಗಣಿ ಮುದ್ದೆಯಿಂದ ಗಣೇಶನ ಪ್ರತಿಮೆ ಮಾಡುತ್ತಿರುವ ಮಹಿಳೆಯರು, ಗಣಪನಿಗೆ ಹಸುವಿನ ಗಂಜಲದಿಂದ ಲೇಪನ ಮಾಡುತ್ತಿರುವ ವ್ಯಕ್ತಿ, ಉಜ್ಜುವ ವಸ್ತುವಿನಿಂದ ಗಣಪನಿಗೆ ಫೈನಲ್ ಟಚ್ ಕೊಡುತ್ತಿರುವ ಕೆಲಸಗಾರ,. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಮಣ್ಯ ದೇವಾಲಯದ ಪಕ್ಕದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ.
ಗೋಶಾಲೆಯಲ್ಲಿರುವ ನೂರಾರು ಗೋವುಗಳ(ಹಸುಗಳ) ಸಗಣಿಯನ್ನು ಒಣಗಿಸಿ ಪುಡಿ ಮಾಡಿದ ನಂತರ, ಗಮ್ ರೀತಿಯ ವಸ್ತುವನ್ನ ಬಳಸಿ, ಒಂದು ರೀತಿಯ ಮುದ್ದೆ ಆಕಾರದಲ್ಲಿ ಅದನ್ನ ತಯಾರಿಸಿ, ಗಣೇಶ ಆಕೃತಿಯ ಅಚ್ಚುಗಳಿಗೆ ಸಗಣಿ ಹಾಕಲಾಗುತ್ತದೆ. ನಂತರ ಕೈಯಿಂದ ಸಂಪೂರ್ಣವಾಗಿ ಅವುಗಳನ್ನು ಆಕಾರ ಮಾಡಿ, ನಂತರ ಗಂಜಲದಿಂದ ಲೇಪನ ಮಾಡುತ್ತಾರೆ. ಎರಡು ಮೂರು ದಿನ ಒಣಗಿ ನಂತರ ಪರಿಸರಕ್ಕೆ ಹೊಂದಿಕೊಳ್ಳುವ ಬಣ್ಣವನ್ನ ಮಾಡುತ್ತಾರೆ.
ಹೀಗೆ ಸಂಪೂರ್ಣ ವಾಗಿ ಸಗಣಿಯಿಂದ ಮಾಡುವ ಗಣಪನಿಗೆ ಬಾರಿ ಬೇಡಿಕೆ ಇದೆ. ಇವುಗಳು ಮನೆಯಲ್ಲಿ ಇಡಲು ತುಂಬಾ ಅನುಕೂಲ. ಅರ್ಧ ಅಡಿಯಿಂದ ಹಿಡಿದು ಒಂದು ಅಡಿಯವರೆಗೆ ಸಗಣಿ ಗಣಪತಿ ಸಿಗುತ್ತವೆ. ಹಣದಲ್ಲೂ ಕೂಡ ಕಡಿಮೆ ಬೆಲೆಗೆ ಸಿಗುತ್ತದೆ. ಒಂದು ಗಣಪನ ಬೆಲೆ 300 ರಿಂದ 1 ಸಾವಿರ ಅಂತಿಮ. ಹಾಗಾಗಿ ಅತೀ ದುಬಾರಿಯೂ ಅಲ್ಲ, ಜೊತೆಗೆ ಸಾಗಣೆ ಮಾಡಲು ಬಹಳ ಕಡಿಮೆ ತೂಕ.
ಗಣೇಶ ಹಬ್ಬದ ನಂತರ ವಿಸರ್ಜನೆ ಮಾಡಲು ಕೂಡ ತುಂಬಾ ಸುಲಭ. ಅಲ್ಲದೆ ಯಾವುದೇ ರೀತಿ ಪರಿಸರಕ್ಕೆ ಹಾನಿ ಮಾಡುವುದಿಲ್ಲ. ಇದು ನೀರಿಗೆ ಹಾಕಿದ ಕೂಡಲೇ ಕರಿಗೆ ಹೋಗುತ್ತದೆ. ನಂತರ ಗೊಬ್ಬರವಾಗಿ ಕೂಡ ಪರಿವರ್ತನೆ ಆಗುತ್ತದೆ.
ಹಾಗಾಗಿ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಬರುವವರು ಈಗಾಗಲೇ ಗಣಪತಿಯನ್ನ ಬುಕ್ ಮಾಡಿಕೊಂಡು ಹೋಗಿದ್ದಾರೆ. ಪ್ರಮುಖವಾಗಿ ಯಾವುದೇ ಗಣಪತಿ ಕೊಂಡರೂ, ಅದರ ಪಕ್ಕದಲ್ಲಿ ಸಗಣಿಯಿಂದ ಮಾಡಿದ ಬೆನಕ ಇಡುವುದು ವಾಡಿಕೆ. ಹಾಗಾಗಿ ಸಗಣಿ ಗಣಪನನ್ನೇ ತೆಗೆದುಕೊಂಡು ಹೋದರೆ ಇನ್ನೂ ಅನುಕೂಲ ಎಂಬುದು ಜನರ ನಂಬಿಕೆ.
ಒಟ್ಟಾರೆ ಮಾರುಕಟ್ಟೆಗೆ ಈಗಾಗಲೇ ಪಿಓಪಿ, ಮಣ್ಣಿನ ಗಣಪ ಎಂಟ್ರಿ ಆಗಿದ್ದು, ಜನ ಸಗಣಿ ಗಣಪನನ್ನ ನೋಡಿ ಆಶ್ಚರ್ಯ ಪಡುವುದಂತೂ ಸತ್ಯ. ಸಗಣಿ ಗಣಪನ್ನ ಕೂರಿಸುವ ಮೂಲಕ ಪರಿಸರ ಸ್ನೇಹಿ ಆಗಲಿ ಎಂಬುದು ನಮ್ಮ ಆಶಯ…
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…