ಗೇಮಿಂಗ್ ಝೋನ್ ನಲ್ಲಿ ಬೆಂಕಿ: ಕನಿಷ್ಠ 27 ಮಂದಿ ಸಾವು

ಬೇಸಿಗೆ ರಜೆ ಮತ್ತು ವಾರಾಂತ್ಯದ ಕಾರಣ ಸುಮಾರು 300 ಜನಸಂದಣಿಯಿಂದ ತುಂಬಿದ್ದ ಎರಡು ಅಂತಸ್ತಿನ ಮನರಂಜನಾ ತಾಣವಾದ ಗುಜರಾತ್ – ರಾಜ್ ಕೋಟ್ ನ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಶನಿವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಒಂಬತ್ತು ಮಕ್ಕಳು ಸೇರಿದಂತೆ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಹಲವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹವಾನಿಯಂತ್ರಣ ಘಟಕದಲ್ಲಿ ಭಾರೀ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.  ಬೆಂಕಿಯು ತ್ವರಿತವಾಗಿ ತೀವ್ರಗೊಳ್ಳುತ್ತಿದ್ದಂತೆ ಸ್ಫೋಟವು ಗೇಮಿಂಗ್ ವಲಯವನ್ನು ದಟ್ಟವಾದ ಹೊಗೆಯಲ್ಲಿ ಆವರಿಸಿದೆ. ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆದ ನಂತರ ಬೆಂಕಿ ವೇಗವಾಗಿ ಹೆಚ್ಚಾಗಿದೆ. ಬೆಂಕಿ ಮತ್ತು ಹೊಗೆಯಿಂದ ಓಡಿಹೋಗಲು ಜನರು ಮುಂದಾಗಿದ್ದಾರೆ.

ಸುಮಾರು ಎರಡು ಗಂಟೆಗಳ ಕಾಲ ಬೆಂಕಿನಂದಿಸುವ ನಿರಂತರ ಕಾರ್ಯಾಚರಣೆಯೊಂದಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

Leave a Reply

Your email address will not be published. Required fields are marked *