ಕನ್ನಡಿಗ ಕೆ.ಎಲ್ . ರಾಹುಲ್ ಅವರ ಸ್ಪೋಟಕ ಆಕರ್ಷಕ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಆರು ವಿಕೆಟ್ಗಳ ಜಯ ದಾಖಲಿಸಿ ಗೆಲುವಿನ ನಾಗಾಲೋಟ ಮುಂದುವರಿಸಿತು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿದರು, ಆದರೆ ಅವರ ಆಯ್ಕೆ ಸರಿಯಾಗಿರಲಿಲ್ಲ ಆರ್ಸಿಬಿ ಆರಂಭಿಕ ಆಟಗಾರರಾದ ಸ್ಟಬ್ಸ್ (37) ಹಾಗೂ ವಿರಾಟ್ ಕೊಹ್ಲಿ (22) ರನ್ ಪೇರಿಸಿ ಭದ್ರ ಅಡಿಪಾಯ ಹಾಕಿದರು.
ನಂತರ ಬಂದ ದೇವದತ್ತ್ ಪಡೀಕಲ್ (1), ಲಿವಿಂಗ್ ಸ್ಟನ್ (4) ಹಾಗೂ ಜಿತೇಶ್ ಶರ್ಮಾ (3) ರನ್ ಪೇರಿಸಿ ನಿರಾಸೆ ಮೂಡಿಸಿದರು ಆದರೆ ಕೊನೆಯಲ್ಲಿ ಭರವಸೆ ಆಟವಾಡಿದ ಟೀಮ್ ಡೇವಿಡ್ (37) ರನ್ ಪೇರಿಸಿ 160 ರ ಗಡಿ ದಾಟಿಸಿದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರರಾದ ಡುಪ್ಲೇಸಿಸ್ (2) ಜೆಎಫ್ಎಂ (7) ಹಾಗೂ ಅಭಿಷೇಕ್ ಪೋರೆಲ್ (7) ರನ್ ಗಳಿಸಿ ಭುವನೇಶ್ವರ್ ಕುಮಾರ್ ಹಾಗೂ ಯಶ್ ದಯಾಳ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಇಂತಹ ಸಂದರ್ಭದಲ್ಲಿ ಜೊತೆಯಾದ ಕನ್ನಡಿಗ ಕೆ.ಎಲ್. ರಾಹುಲ್ ಭರ್ಜರಿ 7 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 93 ರನ್ ಪೇರಿಸಿ ಗೆಲುವಿನ ದಡ ಸೇರಿಸಿದರು, ನಾಯಕ ಅಕ್ಷರ್ ಪಟೇಲ್ (15) ಹಾಗೂ ಸ್ಟಬ್ಸ್ (38) ರನ್ ಪೇರಿಸಿ ತಂಡದ ಗೆಲುವಿಗೆ ಉಡುಗೊರೆ ನೀಡಿದರು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದು ಕಡೆ ಭದ್ರವಾಗಿ ನಿಂತು ತಂಡಕ್ಕೆ ಗೆಲುವು ತಂದು ಕೊಟ್ಟ ಕೆ.ಎಲ್. ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಮುಂದುವರಿದಿದ್ದು, ಎರಡು ದಿನಗಳ ಅಂತರದಲ್ಲಿ ಎರಡು ಮನೆಗಳ ಕಳ್ಳತನ ಹಾಗೂ ಬೈಕ್ ಕಳವು…
ರೈತರಿಗೆ ನೋವಾಗುವ ಯಾವುದೇ ತೀರ್ಮಾನಗಳನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ. ರೈತರ ಸಹಕಾರವಿದ್ದರೆ, ಅವರಿಗೆ ಅಗತ್ಯವಿರುವ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ ಎಂದು…
ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…
ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…