ಗೃಹಲಕ್ಷ್ಮಿ ಯೋಜನೆ ನೋಂದಣಿ: ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಕೇಂದ್ರ ಆರಂಭ

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಕುಟುಂಬದ ಯಜಮಾನಿಗೆ ರೂ. 2000/- ನೀಡುವ ಗೃಹಲಕ್ಷ್ಮಿ ಯೋಜನೆಯು ದಿನಾಂಕ 2023 ರ ಜುಲೈ 19 ರಂದು ಅನುಷ್ಠಾನಗೊಂಡಿರುತ್ತದೆ. 2023 ರ ಜುಲೈ 20 ರಿಂದ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಗ್ರಾಮೀಣ ಭಾಗದ ಫಲಾನುಭವಿಗಳು ಬಾಪೂಜಿ ಸೇವಾಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರ ಮತ್ತು ನಗರ ಸ್ಥಳೀಯ ಸಂಸ್ಥೆಗಳು, ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಾಯಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಫಲಾನುಭವಿಗಳು ಯೋಜನೆಯಡಿ ನೋಂದಾಯಿಸಿಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಸಹಾಯವಾಣಿ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕರ ಕಛೇರಿ, ನಂ 206, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ. ದೂರವಾಣಿ ಸಂಖ್ಯೆ 080-29787445

ದೇವನಹಳ್ಳಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಅಕ್ಷಯ ಭವನ, 2ನೇ ಮಹಡಿ, ಪಿ.ಎಲ್‌ಡಿ ಬ್ಯಾಂಕ್ ಕಟ್ಟಡ, ಬಿ.ಬಿ ರಸ್ತೆ, ದೇವನಹಳ್ಳಿ
ಮೊಬೈಲ್ ಸಂಖ್ಯೆ:7795547823

ದೊಡ್ಡಬಳ್ಳಾಪುರ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಎ.ಪಿ.ಎಂ.ಸಿ ಬಿಲ್ಡಿಂಗ್, ಒಳ ಆವರಣ, ಟಿ.ಬಿ ಸರ್ಕಲ್ ಹತ್ತಿರ, ದೊಡ್ಡಬಳ್ಳಾಪುರ
ಮೊಬೈಲ್ ಸಂಖ್ಯೆ: 7795548195

ಹೊಸಕೋಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಕೆ.ಆರ್.ರೋಡ್, ಪೋಸ್ಟ್ ಆಫೀಸ್ ಹತ್ತಿರ, ಹೊಸಕೋಟೆ.
ಮೊಬೈಲ್ ಸಂಖ್ಯೆ:9513717382

ನೆಲಮಂಗಲ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಹೆಚ್. ಹೊನ್ನದಾಸೇಗೌಡ ಬಿಲ್ಡಿಂಗ್, ಎನ್.ಹೆಚ್ 4, ಸೊಂಡೆಕೊಪ್ಪ ಬೈಪಾಸ್, ನೆಲಮಂಗಲ.
ದೂರವಾಣಿ ಸಂಖ್ಯೆ:080-27722177 ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *