ದೊಡ್ಡಬಳ್ಳಾಪುರ ಉಪವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಗೃಹರಕ್ಷಕ ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ದೊಡ್ಡಬಳ್ಳಾಪುರ ನಗರ, ದೊಡ್ಡಬಳ್ಳಾಪುರ ಗ್ರಾಮಾಂತರ, ಮಹಿಳಾ ಠಾಣೆ, ದೊಡ್ಡಬೆಳವಂಗಲ, ಹೊಸಹಳ್ಳಿ, ರಾಜಾನುಕುಂಟೆ, ವಿಶ್ವನಾಥಪುರ, ಚನ್ನರಾಯಪಟ್ಟಣ, ವಿಜಯಪುರ ಪೊಲೀಸ್ ಠಾಣೆಗಳಿಗೆ ಸುಮಾರು 200 ಮಂದಿ ಗೃಹರಕ್ಷಕರ ಸಿಬ್ಬಂದಿ (ಹೊಂ ಗಾರ್ಡ್) ನೇಮಕಾತಿಗೆ ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿಗಳು ನಗರದ ಡಿವೈಎಸ್ಪಿ ಕಚೇರಿಯಲ್ಲಿ ದೊರೆಯುತ್ತಿದ್ದು, ಅರ್ಜಿ ಪಡೆದವರು 10 ದಿನಗಳ ಒಳಗಾಗಿ ಸಲ್ಲಿಸುವಂತೆ ಡಿವೈಎಸ್ಪಿ ರವಿ ಅವರು ಕೋರಿದ್ದಾರೆ.
ಗೃಹರಕ್ಷಕರ ನೇಮಕಾತಿಗೆ ಅರ್ಹತೆಗಳು: ಲಗತ್ತಿಸಬೇಕಾದ ದಾಖಲಾತಿಗಳು
1. ಮೂಲ ವೈದ್ಯಕೀಯ ಪ್ರಮಾಣ ಪತ್ರ ಲಗತ್ತಿಸುವುದು.
2. ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಪ್ರತಿ ಅಥವಾ ವರ್ಗಾವಣೆ ಪ್ರಮಾಣ ಪತ್ರದ ಪ್ರತಿ ಲಗತ್ತಿಸುವುದು.
3. ಕಳೆದ 06 ತಿಂಗಳ ಅವಧಿಯ ವಾಸವಿರುವ ಸ್ಥಳೀಯ ವಿಳಾಸ ಪ್ರಮಾಣ ಪತ್ರ ನಕಲು ಪ್ರತಿ ಲಗತ್ತಿಸುವುದು.
A) ಆಧಾರ್ ಕಾರ್ಡ್
B) ಚುನಾವಣಾ ಗುರುತಿನ ಚೀಟಿ
C) ಡಿ.ಎಲ್(ಡ್ರೈವಿಂಗ್ ಲೈಸೆನ್ಸ್)
4. ಅರ್ಜಿ ಸಲ್ಲಿಸುವ ದಿನಾಂಕಕ್ಕೆ ವಯಸ್ಸು 19 ರಿಂದ 40 ವರ್ಷದ ಒಳಗಿರಬೇಕು.
5. ದೈಹಿಕವಾಗಿ ಸದೃಢರಾಗಿರಬೇಕು.
6.ಗೃಹರಕ್ಷಕರ ಅರ್ಜಿ ನಮೂನೆ “ಎ” 2ನೇ ಪುಟದಲ್ಲಿ ಇಬ್ಬರು ಗಣ್ಯ ವ್ಯಕ್ತಿಗಳ ಮೊಹರು ಮತ್ತು ಸಹಿ ಮಾಡಿಸುವುದು.
7. ಇತ್ತೀಚಿನ ಎರಡು ಪಾಸ್‌ಪೋರ್ಟ್ ಭಾವ ಚಿತ್ರಗಳು
8. ಅರ್ಜಿದಾರರು ತಾವೇ ಪೊಲೀಸ್ ವೆರಿಫಿಕೇಶನ್ ಮಾಡಿಸಿ ಕೊಡತಕ್ಕದ್ದು.