ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸ್ಕೀಂ ಗೃಹಜ್ಯೋತಿ ಯೋಜನೆಯ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ತಾಂತ್ರಿಕ ತೊಡಕುಗಳ ಕಾರಣಗಳು ಜನರ ನಿದ್ದೆ ಕೆಡೆಸಿದೆ. ಬೆಸ್ಕಾಂ ಕಚೇರಿಗಳಲ್ಲಿ ಮಾತ್ರವಲ್ಲದೆ ಗ್ರಾಮ ಒನ್, ಸೈಬರ್ ಸೆಂಟರ್ ಕೇಂದ್ರಗಳಲ್ಲಿಯೂ ಸರ್ವರ್ ಡೌನ್ ಎಂಬ ನಾಮಫಲಕ ಹಾಕುವಂತಾಗಿದೆ.
ತಾಲ್ಲೂಕಿನ ನಗರ, ಗ್ರಾಮಾಂತರ ಸೇರಿ ವಿವಿಧೆಡೆ ಬೆಸ್ಕಾಂ ಕಚೇರಿಗಳಲ್ಲಿ ಆರಂಭಿಸಿರುವ ಒಟ್ಟು 6 ಕೌಂಟರ್ ಗಳ ಮುಂದೆ ಜನರು ತಮ್ಮ ಆರ್.ಆರ್ ನಂಬರ್, ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಹಿಡಿದು ನೋಂದಾಯಿಸಲು ಕಾಯುತ್ತಾ ಹೈರಾಣಾಗುತ್ತಿದ್ದಾರೆ.
ತಾಲ್ಲೂಕಿನಾದ್ಯಂತ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಳು ಜನತೆ ಉತ್ಸುಕರಾಗಿದ್ದಾರೆ. ಕಳೆದ ಭಾನುವಾರದಂದು ನೋಂದಣಿ ಪ್ರಕ್ರಿಯೆಯು ಆರಂಭಗೊಂಡಿದ್ದು ಗುರುವಾರ ತನಕವೂ ಬೆಸ್ಕಾಂ ಕಚೇರಿ ಮತ್ತು ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಟೆಕ್ನಿಕಲ್ ಪ್ರಾಬ್ಲಂ ಎದುರಾಗುತ್ತಲೇ ಇದೆ. ಬೆಸ್ಕಾಂ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತಿದೆ. ಇತ್ತ ಜನರು ಸರ್ವರ್ ಸರಿ ಹೋಗಬಹುದು ಎಂದು ಕೌಂಟರ್ ಮುಂದೆಯೆ ಗಂಟೆಗಟ್ಟಲೆ ಕಾದು ಕುಳಿತಿದ್ದಾರೆ. ಕೆಲವರು ನಾಳೆ ಬಂದರಾಯಿತು ಎಂದು ವಾಪಸ್ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.
ತಾಲ್ಲೂಕಿನಲ್ಲಿ ಈವರೆಗೆ ಒಂದು ಸಾವಿರಕ್ಕೂ ಹೆಚ್ಚು ಅರ್ಜಿಗಳು ನೋಂದಣಿಯಾಗಿವೆ. ಸರತಿ ಸಾಲಿನಲ್ಲಿ ನಿಂತು ಯೋಜನೆಗೆ ನೋಂದಾಯಿಸಿದವರು ನಿಟ್ಟುಸಿರು ಬಿಟ್ಟರೆ, ನೋಂದಣಿಗೆ ಕಾಯುತ್ತಿದ್ದವರು ಪರಿತಪಿಸುತ್ತಿದ್ದಾರೆ. ಇನ್ನೂ ನೋಂದಾಯಿಸುವ ಗ್ರಾಹಕರ ಮೊಬೈಲ್ ಗೆ ಒಟಿಪಿ ಬರುವುದರಿಂದ ಕೇಂದ್ರಗಳಲ್ಲಿ ಕಾಯಬೇಕಾದ ಅನಿವಾರ್ಯ ಎದುರಾಗಿದೆ. ಸೇವಾ ಸಿಂಧು ಕೇಂದ್ರಗಳಲ್ಲಿ ನೋಂದಾಯಿಸಲು ಬಂದ ಅನೇಕರು ಅಂಗಡಿ ಮಾಲೀಕರನ್ನು ಮನವಿ ಮಾಡಿಕೊಂಡು ದಾಖಲೆಗಳನ್ನು ಮತ್ತು ಮೊಬೈಲ್ ಸಂಖ್ಯೆ ನೀಡಿ ಸರ್ವರ್ ಸರಿಹೋದಾಗ ಅಪ್ ಲೋಡ್ ಮಾಡಿ ಎಂದು ಹೇಳಿ ಹೋಗುತ್ತಿದ್ದವರ ಸಂಖ್ಯೆ ಹೆಚ್ಚಾಗಿತ್ತು.
ಗೃಹಜ್ಯೋತಿ ಯೋಜನೆಯ 200 ಯೂನಿಟ್ ಬಳಕೆಯ ಹೆಚ್ಚಿನ ಫಲಾನುಭವಿಗಳು ಗ್ರಾಮೀಣ ಪ್ರದೇಶದವರೆ ಆಗಿದ್ದಾರೆ. ಹೀಗಾಗಿ ಗ್ರಾಮಾಂತರ ಭಾಗದಲ್ಲಿ ಸುಮಾರು 75 ವರ್ಷಗಳ ಹಿಂದೆ ವಿದ್ಯುತ್ ಸಂಪರ್ಕವನ್ನು ಪಡೆದ ಜನರು ವಯಸ್ಸು ಮತ್ತು ವಿವಿಧ ವಯೋಸಹಜ ಕಾರಣಗಳಿಂದಾಗಿ ಮೃತಪಟ್ಟಿದ್ದಾರೆ. ಅವರ ಅವಲಂಬಿತರು/ಕುಟುಂಬಸ್ಥರು ಆರ್.ಆರ್ ಸಂಖ್ಯೆಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳದೆ ನಿಧನರಾದವರ ಹೆಸರಿನಲ್ಲಿಯೇ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡಿಕೊಂಡು ಬಂದಿರುತ್ತಾರೆ. ಅಂತಹ ಜನರು ಈಗ ಗೃಹಜ್ಯೋತಿ ಯೋಜನೆಯ ಲಾಭಕ್ಕಾಗಿ ತಮ್ಮ ದಾಖಲೆಗಳನ್ನು ಸಲ್ಲಿಸುವ ಮೂಲಕ ಹೆಸರನ್ನು ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಹೆಸರು ಬದಲಾವಣೆ ಬಳಿಕವಷ್ಟೆ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.
ರಾಜ್ಯಾದ್ಯಂತ ಏಕಕಾಲಕ್ಕೆ ಅರ್ಜಿಗಳ ಸಲ್ಲಿಕೆ ಕಾರ್ಯ ನಡೆಯುತ್ತಿರುವುದರಿಂದ ಸರ್ವರ್ ನಲ್ಲಿ ಸಮಸ್ಯೆ ಕಾಣುತ್ತಿದೆ. ನಿಧಾನಗತಿಯಲ್ಲಿ ನಡೆಯುತ್ತಿರುವ ನೋಂದಣಿ ಮುಂದಿನ ಒಂದು ವಾರದಲ್ಲಿ ಎಲ್ಲವೂ ಸರಿಹೋಗಲಿದೆ. ತಾಲ್ಲೂಕಿನಲ್ಲಿ ಮೇಳೆಕೋಟೆಯಲ್ಲಿ ಒಂದು ಕೌಂಟರ್, ನಗರದ ಬೆಸ್ಕಾಂ ಕಚೇರಿಯಲ್ಲಿ ಒಂದು ಕೌಂಟರ್, ಹಳೆ ಕೆಇಬಿ ಆಫೀಸ್ ನಲ್ಲಿ ಎರಡು ಕೌಂಟರ್ ಸೇರಿ ವಿವಿಧೆಡೆ ಒಟ್ಟು ಆರು ಕೌಂಟರ್ ಗಳನ್ನು ತೆರೆಯಲಾಗಿದೆ. ಗೃಹಜ್ಯೋತಿ ಯೋಜನೆ ನೋಂದಣಿ ಪ್ರಕ್ರಿಯೆ ಅತ್ಯಂತ ಸುಲಭವಾಗಿ ಸಾರ್ವಜನಿಕರು ತಮ್ಮ ಮೊಬೈಲ್ ಮುಖಾಂತರವೂ ನೋಂದಯಿಸಿಕೊಳ್ಳಬಹುದು. ತಾಲ್ಲೂಕಿನಲ್ಲಿ ಈವರೆಗೆ ಸುಮಾರು ೧೦೦೦ಕ್ಕೂ ಹೆಚ್ಚು ಮಂದಿ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. ನೋಂದಣಿಗೆ ಯಾವುದೇ ಅಂತ್ಯದ ದಿನಾಂಕ ನಿಗದಿ ಇಲ್ಲ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು ಹೀಗಾಗಿ ಸಾರ್ವಜನಿಕರು ಆತಂಕ ಪಡದೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಬೆಸ್ಕಾಂ ಎಇಇ ಮಂಜುನಾಥ್ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…
ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ ಗೌಡ,…
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…
ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…