ಭಾರತದಲ್ಲಿ ಗೂಗಲ್ ರಾಜಕೀಯ ಜಾಹೀರಾತುಗಳಿಗೆ ಬಿಜೆಪಿ ಅತಿ ಹೆಚ್ಚು ಖರ್ಚು ಮಾಡುತ್ತಿದೆ ಎಂದು ತಿಳಿದುಬಂದಿದೆ.
ಗೂಗಲ್‌ನಲ್ಲಿ ರಾಜಕೀಯ ಜಾಹೀರಾತುಗಳಿಗಾಗಿ ವಿವಿಧ ರಾಜಕೀಯ ಪಕ್ಷಗಳು ಒಟ್ಟು ₹ 63 ಕೋಟಿ ಖರ್ಚು ಮಾಡಲಾಗಿದೆ. ಅದರಲ್ಲಿ ಬಿಜೆಪಿ ಬರೋಬ್ಬರಿ ₹ 30 ಕೋಟಿ ಖರ್ಚು ಮಾಡಿ ಮೊದಲ ಸ್ಥಾನದಲ್ಲಿದೆ. ಕೇಂದ್ರೀಯ ಸಂವಹನ ಬ್ಯೂರೋ ಪ್ರಕಾರ 2024ರ ಜನವರಿ 1 ರಿಂದ ಮಾರ್ಚ್ 3ರ ನಡುವೆ ₹ 21 ಕೋಟಿ ಖರ್ಚು ಮಾಡಿದೆ ಎಂದು ತಿಳಿದುಬಂದಿದೆ.
2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ಫೆಬ್ರವರಿ 2024 ರಿಂದ ರಾಜಕೀಯ ಜಾಹೀರಾತುಗಳ ಮೇಲಿನ ಖರ್ಚು ಹೆಚ್ಚಾಗಿದೆ.
ರಾಜ್ಯವಾರು ಪಟ್ಟಿಯಲ್ಲಿ, ರಾಜಕೀಯ ಜಾಹೀರಾತುಗಳಿಗಾಗಿ ₹ 6 ಕೋಟಿ ಖರ್ಚು ಮಾಡುವ ಮೂಲಕ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿದೆ, ಒಡಿಶಾ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಮತ್ತು ಆಂಧ್ರಪ್ರದೇಶ ನಂತರದ ಸ್ಥಾನದಲ್ಲಿದೆ.