ಕಲಿಯುಗ ಕಾಮಧೇನು ಶ್ರೀಗುರು ರಾಘವೇಂದ್ರ ಸ್ವಾಮಿಯ 430ನೇ ಜನ್ಮದಿನವನ್ನು ಬಾಶೆಟ್ಟಿಹಳ್ಳಿಯ ವಿಜಯನಗರದಲ್ಲಿರುವ ಶ್ರೀಗುರು ರಾಘವೇಂದ್ರ ಸ್ವಾಮಿಯ ಸನ್ನಿಧಿಯಲ್ಲಿ ವರ್ಧಂತಿ ಉತ್ಸವವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಈ ವೇಳೆ ಶ್ರೀಗುರು ರಾಘವೇಂದ್ರ ಸ್ವಾಮಿಯ ಆರಾಧಕ, ಅರ್ಚಕ ಗುರುರಾಜಾಚಾರ್ ಮಾತನಾಡಿ, ವರ್ಧಂತಿ ಉತ್ಸವವನ್ನ ಪ್ರತಿ ವರ್ಷದಂತೆ ಈ ವರ್ಷವೂ ಸ್ವಾಮಿಯ ಸನ್ನಿಧಿಯಲ್ಲಿ ಗುರುವೈಭವೋತ್ಸವವಾಗಿ ಅದ್ಧೂರಿಯಿಂದ ಆಚರಿಸಲಾಗುತ್ತಿದೆ. ಇಂದು ಬೆಳಗ್ಗೆಯಿಂದಲೇ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರ ನಡೆಸಲಾಯಿತು. ಸ್ವಾಮಿಯ ದರ್ಶನ ಪಡೆಯಲು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ ಎಂದರು.
ಸ್ವಾಮಿಗೆ ಅಭಿಷೇಕ ನಂತರ ವಿವಿಧ ಹೂ ಗಳಿಂದ ಅಲಂಕಾರ ಮಾಡಲಾಗಿದೆ. ರಾಯರು ಸಂಗೀತ ಪ್ರಿಯರಾಗಿದ್ದರು.. ರಾಯರ ವರ್ಧಂತಿ ಮಹೋತ್ಸವ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ ಯಲಹಂಕದ ಬಿಲ್ವ ವಿನಾಯಕ ಭಜನಾತಂಡದವರು ನಾದಾಹಾರ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ರಾಯರ ಅನುಗ್ರಹ ಎಲ್ಲರ ಮೇಲಿರಲಿ. ಸಕಲ ಜೀವಕೋಟಿರಾಶಿಗಳಿಗೆ ಒಳಿತು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ದೇವರ ದರ್ಶನಕ್ಕೆ ಬಂದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.