
ವಿದ್ಯಾರ್ಥಿ ಮತ್ತು ಶಿಕ್ಷಕನ ಬಾಂಧವ್ಯ, ಸರ್ಕಾರಿ ಶಾಲೆಗಳ ಇಂದಿನ ಸ್ಥಿತಿಗತಿ ಮೊದಲಾದ ಅಂಶಗಳು ಒಳಗೊಂಡಿರುವ ‘ನನ್ನ ಶಾಲೆಯನ್ನು ಪ್ರೀತಿಸುತ್ತೇನೆ’ ಎಂಬ ಅಡಿಬರಹವಿರುವ ಗುರಿ ಸಿನಿಮಾದಲ್ಲಿ ನಟ ಅಚ್ಯುತ್ ಕುಮಾರ್, ನಾಗಾಭರಣ, ಅವಿನಾಶ್ಉಗ್ರಂ ಮಂಜು ಮತ್ತು ಜಯಶ್ರೀ, ದೊಡ್ಡಬಳ್ಳಾಪುರದ ಹೆಮ್ಮೆಯ ಕುವರ ಮಹಾನಿಧಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
‘ಗುರಿ’ ಚಿತ್ರದ ಟೀಸರ್, ಟ್ರೈಲರ್ ಮತ್ತು ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. 80ರ ದಶಕದಲ್ಲಿ ರಾಜ್‌ಕುಮಾರ್ ಅಭಿನಯಸಿದ್ದ ‘ಗುರಿ’ ಚಿತ್ರವು ಸೂಪರ್ ಹಿಟ್ ಆಗಿತ್ತು. ಇದೀಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸಿದ್ಧಗೊಂಡಿದ್ದು, ಸೆಲ್ವಂ ಮಾದಪ್ಪನ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರ ಇದೇ ತಿಂಗಳ 12ರಂದು ಅಂದರೆ ನಾಳೆ ಬೆಳ್ಳಿ ಪರದೆ ಮೇಲೆ ತೆರೆ ಕಾಣಲಿದೆ….

ಗುರಿ ಸಿನಿಮಾವು ನೈಜ ಘಟನೆಯನ್ನು ಆಧರಿಸಿದೆ. ಒಮ್ಮೆ ಕೋಲಾರದ ತೇರಳ್ಳಿ ಬೆಟ್ಟಕ್ಕೆ ಹೋಗಿದ್ದಾಗ, ಅಲ್ಲಿ ಸರ್ಕಾರಿ ಶಾಲೆಯನ್ನು ಮುಚ್ಚಲಾಗಿತ್ತು. ಮಕ್ಕಳು ಶಿಕ್ಷಕರೊಂದಿಗೆ ಕೆರೆಯಲ್ಲಿ ಆಟವಾಡುತ್ತಿದ್ದರು. ಸ್ಥಳೀಯರೊಂದಿಗೆ ಮಾತನಾಡಿದಾಗ ಒಂದಷ್ಟು ವಿಚಾರ ತಿಳಿಯಿತು. ಅದನ್ನೇ ಚಿತ್ರಕಥೆಯಾಗಿಸಿದ್ದೇನೆ. ವಿದ್ಯಾರ್ಥಿ ಮತ್ತು ಶಿಕ್ಷಕನ ಬಾಂಧವ್ಯ, ಸರ್ಕಾರಿ ಹಾಗೂ ಖಾಸಗಿ ಶಾಲೆಯ ಸಂಘರ್ಷ, ಸರ್ಕಾರಿ ಶಾಲೆಗಳ ಇಂದಿನ ಸ್ಥಿತಿಗತಿ ಮೊದಲಾದ ಅಂಶಗಳು ಚಿತ್ರದಲ್ಲಿವೆ’ ಎಂದು ನಿರ್ದೇಶಕ ಮಾದಪ್ಪನ್ ತಿಳಿಸಿದ್ದಾರೆ.
ಚಿತ್ರಕ್ಕೆ ವಿಷ್ಣುದುರ್ಗಾ ಪ್ರೊಡಕ್ಷನ್ ಅಡಿಯಲ್ಲಿ ರಾಧಿಕಾ.ಎಸ್.ಆರ್ ಮತ್ತು ಚಿತ್ರಲೇಖಾ.ಎಸ್ ನಿರ್ಮಾಣ ಮಾಡಿದ್ದಾರೆ. ಬಾಲನಟರಾದ ಮಹಾನಿಧಿ, ಟಿ.ಎಸ್.ನಾಗಾಭರಣ, ಅವಿನಾಶ್, ಪವನ್‌ಕುಮಾರ್, ಜೀವಿತ್‌ಭೂಷಣ್, ಜಯಶ್ರೀ, ಉಗ್ರಂ ಮಂಜು, ಸಂದೀಪ್ ಮಲಾನಿ, ಜಾಕ್ ಮಂಜು ಮನೋಹರ್ ಮುಂತಾದವರು ಚಿತ್ರದಲ್ಲಿದ್ದಾರೆ.

ಪಳನಿ ಸೇನಾಪತಿ ಸಂಗೀತವಿದೆ. ನಿರ್ದೇಶಕರೇ ಛಾಯಾಚಿತ್ರಗ್ರಹಣವನ್ನೂ ಮಾಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ವಿ.ಮನೋಹರ್, ಮಧುಸೂದನ್ ಸಾಹಿತ್ಯ ಚಿತ್ರಕ್ಕಿದೆ. ಬೆಂಗಳೂರು, ಕೋಲಾರ, ತೇರಳ್ಳಿ ಬೆಟ್ಟ ಮೊದಲಾದೆಡೆ ಚಿತ್ರೀಕರಣಗೊಂಡಿದೆ.