“ಗುಣಮಟ್ಟದ ಚಿಕಿತ್ಸೆಗೆ ಸಹ್ಯಾದ್ರಿ ಆಸ್ಪತ್ರೆ ಬದ್ಧ”

ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿ, ಗೌರಿಬಿದನೂರು ರಸ್ತೆಯ ಫ್ರೆಂಡ್ಸ್ ಫಂಕ್ಷನ್ ಹಾಲ್ ಎದುರಿನ ಸಹ್ಯಾದ್ರಿ ಆಸ್ಪತ್ರೆಯು 2025ರ ಮೇ.11ರಂದು ಪ್ರಾರಂಭವಾಗಿ ಆಧುನಿಕ ತಂತ್ರಜ್ಞಾನ, ನುರಿತ ವೈದ್ಯಕೀಯ ಸಿಬ್ಬಂದಿ ಹಾಗೂ ಸಮಗ್ರ ಆರೋಗ್ಯ ಸೇವೆ ಒದಗಿಸುತ್ತಿದೆ ಎಂದು ಸಹ್ಯಾದ್ರಿ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ…

ಆಸ್ಪತ್ರೆಯು ಕೇವಲ ಚಿಕಿತ್ಸಾ ಕೇಂದ್ರವಾಗಿರದೇ, ಸಮಗ್ರ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವ ಕೇಂದ್ರವಾಗಿದೆ. ರೋಗಗಳನ್ನು ಪ್ರಥಮ ಹಂತದಲ್ಲೇ ಕಂಡು ಹಿಡಿಯಲು ನಾವು ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದೆ.

ಆರ್ಥಿಕ ಭಾರವಿಲ್ಲದ ಆರೋಗ್ಯಸೇವೆ ಸಮಾಜದ ಎಲ್ಲ ವರ್ಗಗಳಿಗೂ ಲಭ್ಯವಾಗಲೆಂದು ಪ್ರಯತ್ನಿಸುತ್ತಿದ್ದೇವೆ‌. ರೈತರಿಗೆ, ಹಾಗೂ ಸೈನಿಕರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ತಿಳಿಸಿದೆ…

ಜನರಲ್ ಮೆಡಿಸಿನ್, ಮಧುಮೇಹಶಾಸ್ತ್ರ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಬಂಜೆತನ, ಮೂಳೆ ಚಿಕಿತ್ಸೆ, ಸಾಮಾನ್ಯ ಮತ್ತು ಲ್ಯಾಫ್ರೊಸ್ಕೋಪಿಕ್ ಸರ್ಜರಿ, ಕಿವಿ,‌ ಮೂಗು, ಗಂಟಲು ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ಮನೋವೈದ್ಯ ಶಾಸ್ತ್ರ, ನರವಿಜ್ಞಾನ, ಗ್ಯಾಸ್ಟ್ರೋಎಂಟರಾಲಜಿ, ಹೃದಯಶಾಸ್ತ್ರ, ಪಲ್ಮನಾಲಜಿ, ರೆಡಿಯೋಲಜಿ, ರೋಗ ವಿಜ್ಞಾನ, ಟ್ರಾಮಾ ಕೇರ್ ಸೆಂಟರ್, ಫಾರ್ಮಸಿ, ನೆಫ್ರಾಲಜಿ, ಎಂಡೋಕ್ರೈನಾಲಜಿ, ಮೂತ್ರಶಾಸ್ತ್ರ, ಪ್ಲಾಸ್ಟಿಕ್ ಸರ್ಜರಿ, ನರ ಶಸ್ತ್ರಚಿಕಿತ್ಸೆ, ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆ, ಮಾಡ್ಯುಲರ್ ಒಟಿ(2), 24*7 ಅಪಘಾತ ಮತ್ತು ತುರ್ತು ಸೇವೆಗಳು, 24*7 ಅಂಬುಲೆನ್ಸ್ ಸೇವೆಗಳು, 24*7 ಸಿಟಿ ಸ್ಕ್ಯಾನ್, ಎಕ್ಸ್ ರೇ, ಡಯಾಲಿಸಿಸ್, ಭೌತ ಚಿಕಿತ್ಸೆ, ಗೃಹ ಆರೈಕೆ ಸೇವೆಗಳು, ಆರೋಗ್ಯ ವಿಮೆ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳು ಆಸ್ಪತ್ರೆಯಲ್ಲಿ ದೊರೆಯಲಿದೆ ಎಂದು ಹೇಳಿದೆ……

ಹೆಚ್ಚಿನ‌ ಮಾಹಿತಿಗಾಗಿ ಸಂಪರ್ಕಿಸಿ: 6363415184

Leave a Reply

Your email address will not be published. Required fields are marked *

error: Content is protected !!