ಗುಜರಿ ಅಂಗಡಿ ಮುಂದೆ ಎಂದಿನಂತೆ ನಿಲ್ಲಿಸಿದ್ದ ಗೂಡ್ಸ್ ವಾಹನವನ್ನು ರಾತ್ರೋರಾತ್ರಿ ಕಳವು ಮಾಡಿರುವ ಘಟನೆ ನಗರದ ಡಿ.ಕ್ರಾಸ್ ಸಮೀಪದ ರೈಲ್ವೆ ಅಂಡರ್ ಪಾಸ್ ಬ್ರಿಡ್ಜ್ ಬಳಿ ನಡೆದಿದೆ.
ನಗರದ ಡಿ.ಕ್ರಾಸ್ ಬಳಿ ಗುಜರಿ ಅಂಗಡಿ ಮಾಲೀಕ ನಿಸಾರ್ ಅಹಮದ್ ಎಂಬುವರು ಆ.24ರ ರಾತ್ರಿ ಎಂದಿನಂತೆ ಗುಜರಿ ಅಂಗಡಿ ಮುಂಭಾಗ ನಿಲ್ಲಿಸಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ಮಾಡೆಲ್ ಹೆಸರಿನ ಗೂಡ್ಸ್ ಗಾಡಿಯನ್ನು ಪಾರ್ಕ್ ಮಾಡಿ ಹೋಗಿದ್ದಾರೆ. ಆ.25ರ ಬೆಳಗ್ಗೆ ಅಂಗಡಿ ಬಳಿ ಬಂದು ನೋಡುವಷ್ಟರಲ್ಲಿ ವಾಹನ ನಾಪತ್ತೆಯಾಗಿದೆ.
ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಗುಜರಿ ಅಂಗಡಿ ಮಾಲೀಕ ನಿಸಾರ್ ಅಹ್ಮದ್ ಮಾತನಾಡಿ, ಗೂಡ್ಸ್ ವಾಹನ ಖರೀದಿಸಲು ನನ್ನ ಹೆಂಡತಿ ಮಹಿಳಾ ಸ್ತ್ರೀ ಸಂಘದಲ್ಲಿ 2 ಲಕ್ಷ್ಮ ರೂ. ಸಾಲ ಮಾಡಿ ಕೊಟ್ಟಿದ್ದರು. 9 ಲಕ್ಷ ಮೌಲ್ಯದ ಗಾಡಿಯನ್ನು ಗುಜರಿ ವಸ್ತುಗಳ ಸಾರಿಗೆಯ ಅನುಕೂಲ ದೃಷ್ಟಿಯಿಂದ ಕಳೆದ ಎರಡೂವರೆ ತಿಂಗಳ ಹಿಂದೆ ತೆಗೆದುಕೊಂಡಿದ್ದೆ. ನಮ್ಮ ಕುಟುಂಬಕ್ಕೆ ಗುಜರಿ ಅಂಗಡಿಯೇ ಜೀವನಾಧಾರ, ಇದಕ್ಕಾಗಿ ಹಲವು ವರ್ಷಗಳಿಂದ ದುಡಿದ ಹಣವನ್ನು ಗೂಡ್ಸ್ ವಾಹನ ಖರೀದಿಸಲು ಬಂಡವಾಳವನ್ನು ಹಾಕಿದ್ದೆ. ಇದೀಗ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ನಮಗೆ ಆಘಾತವಾಗಿದೆ ಬ್ಯಾಂಕ್ ನವರು ಇಎಂಐ ಕಟ್ಟಿ ಗಾಡಿ ಸಿಗುತ್ತೆ ಅಂತಾ ಹೇಳುತ್ತಿದ್ದಾರೆ. ಇಎಂಐ ಕಟ್ಟಲು ಹಣ ಇಲ್ಲ ಎಂದು ಕಣ್ಣಿರಿಟ್ಟರು.