ಗಣಪತಿ ಹಾಗೂ ತಾಯಿ ದುರ್ಗಾಪರಮೇಶ್ವರಿ ದೇವಿಯ ಪ್ರತಿಷ್ಠಾಪನೆ

ತಾಲೂಕಿನ ಕೊನಘಟ್ಟ ಗ್ರಾಮದ ದೊಡ್ಡಮ್ಮ ದೇವಾಲಯದಲ್ಲಿ ಶ್ರೀ ದೊಡ್ಡಮ್ಮ ತಾಯಿ ಯುವಕರ ಬಳಗ, ಓಂಶಕ್ತಿ ಸೇವಾ ಟ್ರಸ್ಟ್ ಹಾಗೂ ಶ್ರೀ ವೀರಭದ್ರಸ್ವಾಮಿ ಭಜನಾ ಮಂಡಲಿ ಯವರ ನೇತೃತ್ವದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಗಣಪತಿ ಹಾಗೂ ತಾಯಿ ದುರ್ಗಾಪರಮೇಶ್ವರಿ ದೇವಿಯ ಪ್ರತಿಷ್ಠಾಪನೆ ಮಾಡಿ ವಿವಿಧ ಫಲ‌ ಪುಷ್ಪಗಳಿಂದ ಅಲಂಕರಿಸಿ ವಿಜೃಂಭಣೆಯಿಂದ ಪೂಜೆ ಪುನಸ್ಕಾರ ನೆರವೇರಿಸಲಾಗಿತ್ತು.

ಈ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜ್ ಅವರು ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಕೊನಘಟ್ಟ ಗ್ರಾಮ ಪಂಚಾಯತಿ ಸದಸ್ಯರಾದ ಎಲ್ ಆರಾಧ್ಯ, ಭಾಗ್ಯಮ್ಮ ಸುಬ್ಬಣ್ಣ, ಜ್ಯೋತಿ ರಮೇಶ್ ಹಾಗೂ ಕೆ ಎಂ ರಾಮಾಂಜಿನಪ್ಪನವರು ಮತ್ತು ಹಾಲಿನ ಡೈರಿ ನಿರ್ದೇಶಕರು, ಊರಿನ ಮುಖಂಡರಾದ ಶ್ರೀನಿವಾಸ ಶೆಟ್ಟಿ ಹಾಗೂ ದೊಡ್ಡಬಚ್ಚಪ್ಪನವರು ಸೇರಿದಂತೆ ಊರಿನ ಸಮಸ್ತ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತೆಯ ದರ್ಶನ ಪಡೆದು ಪುನೀತರಾದರು.

ದೇವಾಲಯದ ಅರ್ಚಕರಾದ ಪಾಪೇಗೌಡರು ಮಾತನಾಡಿ, ಅನಾದಿಕಾಲದಿಂದಲೂ ದೇವಿಯರ ಪ್ರತಿಷ್ಟಾಪನೆ ಕಾರ್ಯ ನೆಡೆಯುತ್ತಿದ್ದು, ಈ ಭಾಗದ ಜನರು ಆರೋಗ್ಯವಾಗಿರಲೆಂದು ಹಾಗೂ ಮಾತೆಯ ಕೃಪೆಯಿಂದ ಈ ಭಾಗಗಳಲ್ಲಿ ಮಳೆ ಬೆಳೆಗಳು ಚೆನ್ನಾಗಿ ಆಗಲೆಂದು ಸಮಸ್ತ ನಾಡಿನ ಜನತೆಗೆ ಆಯುರಾರೋಗ್ಯ ನೀಡಲೆಂದು ದೇವರಲ್ಲಿ ಕೇಳಿಕೊಂಡರು.

Leave a Reply

Your email address will not be published. Required fields are marked *