ಮದುವೆಯಾಗಿ ಒಂದು ವರ್ಷ ಸಹ ಆಗಿರಲಿಲ್ಲ, ಪದೇ ಪದೇ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ ಧನದಾಹಿ ಗಂಡ, ಹೊಟ್ಟೆಯಲ್ಲಿದ್ದ ಒಂದೂವರೆ ತಿಂಗಳ ಶಿಶುವನ್ನ ಗರ್ಭಪಾತ ಮಾಡಿಸಿದ ಅತ್ತೆ, ಗಂಡನ ಮನೆಯವರ ಕಿರುಕುಳದಿಂದ ನವ ವಿವಾಹಿತೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ, ಗಂಡನ ಮನೆಯವರೇ ಕೊಲೆ ಮಾಡಿದ್ದಾರೆಂದು ಮೃತಳ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಅಂಚರಹಳ್ಳಿಯಲ್ಲಿ ಘಟನೆ ನಡೆದಿದ್ದು, ಸುಮಾರು 22 ವರ್ಷದ ನವ ವಿವಾಹಿತೆ ತನುಶ್ರೀ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾಳೆ, ಆಕೆಯ ಸಾವಿನ ಸುದ್ದಿಯನ್ನು ತವರು ಮನೆಗೆ ತಿಳಿಸದ ಗಂಡನ ಮನೆಯವರು ಪರಾರಿಯಾಗಿದ್ದಾರೆ, ಮೂರನೇ ವ್ಯಕ್ತಿಗಳಿಂದ ಸಾವಿನ ಸುದ್ದಿ ತಿಳಿದು ಬಂದ ಹೆತ್ತವರಿಗೆ ಮಗಳ ಮುಖವನ್ನು ನೋಡಲು ಸಾಧ್ಯವಾಗದೆ ಕಣ್ಣಿರೀಡುತ್ತಿದ್ದಾರೆ.
ಮೃತ ತನುಶ್ರೀ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜಂಗಮಸೀಗೆಹಳ್ಳಿಯ ನಿವಾಸಿ, ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಅಂಚರಹಳ್ಳಿಯ ನವೀನ್ ಕುಮಾರ್ ಜೊತೆ ತನುಶ್ರೀಯ ಮದುವೆ ಮಾಡಲಾಗಿತ್ತು. ಮದುವೆ ಸಮಯದಲ್ಲಿ 750 ಗ್ರಾಂ ಚಿನ್ನಾಭರಣ ಸೇರದಂತೆ ದೊಡ್ಡಬಳ್ಳಾಪುರ ನಗರದಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ರು.
ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ನವೀನ್ ಕುಮಾರ್ ಗೆ ಹಣದಾಹ ಇತ್ತು, ವರದಕ್ಷಿಣೆ ಹಣಕ್ಕಾರಿ ಪದೇ ಪದೇ ಹೆಂಡತಿಯನ್ನ ತವರು ಮನೆಗೆ ಕಳಿಸುತ್ತಿದ್ದಾನಂತೆ, ಮಗಳ ಸುಖ ಸಂತೋಷಕ್ಕಾಗಿ ಹೆತ್ತವರು ಹಣವನ್ನ ಕೊಟ್ಟು ಕಳುಸುತ್ತಿದ್ದರು, ಫೆಬ್ರವರಿ 9ರಂದು ಸಹ 1 ಲಕ್ಷ 20 ಸಾವಿರ ಹಣವನ್ನ ಕೊಟ್ಟು ಕಳಿಸಿದರು, ಇಷ್ಟಕ್ಕೂ ಸುಮ್ಮನಾಗದ ಪಾಪಿಗಳು ಮಗಳನ್ನೇ ಕೊಂದು ಹಾಕಿದ್ದಾರೆಂದು ಮೃತಳ ಮನೆಯವರು ಆರೋಪ ಮಾಡಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನುಶ್ರೀ ಕುಟುಂಬಸ್ಥರು ವರದಕ್ಷಿಣಿ ಕಿರುಕುಳದಿಂದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ, ತನುಶ್ರೀ ಗಂಡನ ಮನೆಯಲ್ಲಿ ನೇಣು ಹಾಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾಳೆ, ಆದರೆ ಮೃತಳ ಕುಟುಂಬಸ್ಥರು ಅತ್ತೆ ಸುವರ್ಣಮ್ಮ, ಮೈದುನ ಕಿರಣ್ ಕುಮಾರ್, ಗಂಡ ನವೀನ್ ಕುಮಾರ್ ಹೊಡೆದು ಸಾಯಿಸಿದ್ದಾರೆಂದು ಆರೋಪ ಮಾಡಿದ್ದು, ಅವರಿಗೆ ತಕ್ಕ ಶಿಕ್ಷೆಯಾಗಲೇ ಬೇಕೆಂದು ಒತ್ತಾಯಿಸಿದರು.
2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…
ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…