ಗಂಡನ ಮನೆಯಲ್ಲಿ ನೇಣಿಗೆ ಶರಣಾದ ಗೃಹಿಣಿ: ಗೃಹಿಣಿಯದ್ದು ಆತ್ಮಹತ್ಯೆಯಲ್ಲ ಕೊಲೆ ಅಂತ ಗೃಹಿಣಿಯ ತವರು ಮನೆಯವರ ಆರೋಪ

ಆಕೆಯನ್ನ 7 ವರ್ಷಗಳಿಂದೆ ಮದುವೆ ಮಾಡಿ ಗಂಡನ ಕಳಿಸಿಕೊಡಲಾಗಿತ್ತು. ಮದುವೆಯಾಗಿ ಸುಖದಿಂದ ಸಂಸಾರ ಮಾಡ್ತಿದ್ದ ಆಕೆಗೆ ವರ್ಷಗಳು ಕಳೆಯುತ್ತಿದ್ದಂತೆ ಗಂಡನ ಕಿರುಕುಳ ಜಾಸ್ತಿಯಾಗಿತ್ತು. ಹೀಗೆ ಕುಡಿದು ಮನೆಗೆ ಬಂದ ಗಂಡ ಪತ್ನಿಯನ್ನ ಹಿಂಸೆಕೊಟ್ಟಿದ್ದು, ಗಂಡನ ಕಾಟಕ್ಕೆ ಬೇಸತ್ತ ಪತ್ನಿ ನೇಣಿಗೆ ಶರಣಾಗಿದ್ರೆ, ಇತ್ತ ಕುಟುಂಬಸ್ಥರು ಕೊಲೆ ಎಂದು ಆರೋಪ ಮಾಡಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ಓದಿ….

ಈ ಪೋಟೊದಲ್ಲಿ ಕಾಣಿಸುತ್ತಿರೋ ಈ ಗೃಹಿಣಿ ಹೆಸರು ಸಂಧ್ಯಾ (27). ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಬೆಳಮಂಗಲ ಗ್ರಾಮದ ಈಕೆಯನ್ನ, ದೇವನಹಳ್ಳಿ ತಾಲೂಕಿನ ಬೊಮ್ಮವಾರ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು.

ಕಳೆದ 7 ವರ್ಷಗಳಿಂದೆ ಬೊಮ್ಮವಾರ ಗ್ರಾಮದ ಅನಂತ್ ಕುಮಾರ್ ಎಂಬುವವನ್ನ ವರಿಸಿದ್ದ ಈಕೆ ಆರಂಭದಲ್ಲಿ ಸಂಸಾರ ಚೆನ್ನಾಗಿತ್ತು. ಆದ್ರೆ ದಿನ ಕಳೆದಂತೆ ಗಂಡ ಕುಡಿತದ ದಾಸನಾಗಿ ಮನೆಗೆ ಬಂದವನು ಪತ್ನಿಗೆ ಚಿತ್ರಹಿಂಸೆ ಕೊಡ್ತಿದ್ದನಂತೆ. ಹೀಗೆ ಪತ್ನಿಗೆ ಪ್ರತಿನಿತ್ಯ ಪತ್ನಿಗೆ ಕಿರುಕುಳ ಕೊಡ್ತಿದ್ದು ನಿನ್ನೆಯು ಸಹ ಕುಡಿದು ಬಂದ ಗಂಡ ಅನಂತ್ ಪತ್ನಿಯ ಮೇಲೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದನಂತೆ. ಇದರಿಂದ ಮನನೊಂದ ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಅಂದಹಾಗೆ ಗಂಡ ಅನಂತ್ ಕುಮಾರ್ ಮತ್ತು ಕುಟುಂಬಸ್ಥರ ಕಿರುಕುಳದಿಂದ ಮಹಿಳೆ ಸಾವು ಆರೋಪದ ಜೊತೆಗೆ ಗಂಡನ ಮನೆಯವರನ್ನ ಬಂಧಿಸುವಂತೆ‌ ವಿಶ್ವನಾಥಪುರ ಪೊಲೀಸ್ ಠಾಣೆ ಬಳಿ ಕಾರಿನಲ್ಲಿ ಶವವಿಟ್ಟುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತ ಮಹಿಳೆಯ ತವರು ಮನೆಯವರಿಂದ ಗಂಡನ ಮನೆಯವರ ವಿರುದ್ದ ಕೊಲೆ ಆರೋಪ ಮಾಡಿದ್ದು, ಗೃಹಿಣಿ ಸಾವನ್ನಪುತ್ತಿದ್ದಂತೆ ಗಂಡ ಹಾಗೂ ಮನೆಯವರು ನಾಪತ್ತೆಯಾಗಿದ್ದರಂತೆ. ಹೀಗಾಗಿ ಪೊಲೀಸ್ ಠಾಣೆ ಮುಂದೆ ಕಾರಿನಲ್ಲೆ ಶವತಂದು ಈ ಕೂಡಲೇ ಗಂಡ ಅನಂತ್ ನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಒಟ್ಟಾರೆ, ಆತ್ಮಹತ್ಯೆ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೆ ಇದು ಆತ್ಮಹತ್ಯೆಯೋ ಕೊಲೆಯೋ ಅನ್ನೋದು ಬೆಳಕಿಗೆ ಬರಬೇಕಿದೆ.

Leave a Reply

Your email address will not be published. Required fields are marked *

error: Content is protected !!