
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಗಂಟಿಗಾನಹಳ್ಳಿ ಸರ್ಕಾರಿ ಹಿರಿಯ ಪ್ರಥಮಿಕ ಶಾಲೆಯಲ್ಲಿ ಕಳ್ಳತನವಾಗಿರುವ ಘಟನೆ ನಡೆದಿದೆ.

ಶಾಲೆಗೆ ದಿನಾಂಕ 03/10/2024 ರಿಂದ ದಿನಾಂಕ 20/10/2024 ವರೆಗೆ ದಸರಾ ರಜೆ ನೀಡಲಾಗಿತ್ತು. ದಿನಾಂಕ 17/10/2024 ರಂದು ವಾಲ್ಮೀಕಿ ಜಯಂತಿ ಆಚರಣೆ ಮಾಡಲು ಬಂದಾಗ ನಾವು ಎಲ್ಲಾ ಕೊಠಡಿಗಳನ್ನು ಗಮನಿಸಿರುತ್ತೇವೆ ಯಾವುದೇ ತೊಂದರೆ ಆಗಿರುವುದಿಲ್ಲ. ದಸರಾ ರಜೆ ಮುಗಿದ ನಂತರ ನಾವು ದಿನಾಂಕ 21/10/2024 ರಂದು ಬೆಳಿಗ್ಗೆ 9.30 ಗಂಟೆಗೆ ಶಾಲೆಗೆ ಬಂದಾಗ ಶಾಲೆಯ ಬೀಗ ಹೊಡೆದು ತರಗತಿ ಕೊಣೆಯಲ್ಲಿದ್ದ 49 ಇಂಚಿನ ಎಲ್.ಜಿ ಟಿವಿಯನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 20,000/-ರೂ. ಬೆಲೆ ಬಾಳುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಮುತ್ತುರಾಜು ಅವರು ತಿಳಿಸಿದ್ದಾರೆ.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.